ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ರಕ್ಷಣಾ ಕ್ಷೇತ್ರದಲ್ಲಿ ನಿತ್ಯ ಒಂದಲ್ಲ ಒಂದು ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸುತ್ತಲೇ ಇದೆ. ಇಂದು ಅದು ಸೂಪರ್ಸಾನಿಕ್ ಕ್ಷಿಪಣಿ ನೆರವಿನ ಟಾರ್ಪಿಡೊ ʼSupersonic Missile assisted release of Torpedo- SMARTʼ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
ಜಲಾಂತರ್ಗಾಮಿ ವಿರೋಧಿ ಯುದ್ಧದಲ್ಲಿ ಸ್ಟ್ಯಾಂಡ್-ಆಫ್ ಸಾಮರ್ಥ್ಯಕ್ಕಾಗಿ ಇದು ಪ್ರಮುಖ ತಂತ್ರಜ್ಞಾನದ ಪ್ರಗತಿಯಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ. ಈ ಮಹತ್ವದ ಸಾಧನೆಗಾಗಿ ಡಿಆರ್ಡಿಒ ಮತ್ತು ಇತರ ಪಾಲುದಾರರನ್ನೂ ಅವರು ಅಭಿನಂದಿಸಿದ್ದಾರೆ.
SMART ತನ್ನ ಹೆಸರಿನಂತೆ ಹೈಬ್ರಿಡ್ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದ್ದು, ಶಸ್ತ್ರಾಸ್ತ್ರ ವ್ಯವಸ್ಥೆಯ ವ್ಯಾಪ್ತಿ ಮತ್ತು ವೇಗವನ್ನು ವಿಸ್ತರಿಸಲು ಒಂದು ಶಸ್ತ್ರಾಸ್ತ್ರ ವ್ಯವಸ್ಥೆಯ ತಯಾರಿಕೆಗೆ ಎರಡು-ಶಸ್ತ್ರಾಸ್ತ್ರ ಸಾಮರ್ಥ್ಯಗಳು ಸೇರಿಸುವುದೇ SMART.
The @DRDO_India has successfully flight tested the Supersonic Missile assisted release of Torpedo, SMART. This will be a major technology breakthrough for stand-off capability in anti-submarine warfare. I congratulate DRDO and other stakeholders for this significant achievement.
— Rajnath Singh (@rajnathsingh) October 5, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.