ನವದೆಹಲಿ: ಅಕ್ಟೋಬರ್ 3 ರಂದು ದೇಶದ ಜನತೆ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದ ಹಿಮಾಚಲ ಪ್ರದೇಶದ ಅಟಲ್ ಟನಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಲಡಾಖ್ಗೆ ಸಂಪರ್ಕ ಕಲ್ಪಿಸುವ ಶಿಂಕು-ಲಾ ಪಾಸ್ ಬಳಿ ನಿರ್ಮಾಣವಾಗುತ್ತಿರುವ ಸುರಂಗ ಕಾಮಗಾರಿಯನ್ನು ತ್ವರಿತವಾಗಿ ಮಾಡುವ ಮೂಲಕ ಮುಂದಿನ ಮೂರು ವರ್ಷಗಳಲ್ಲೇ ಪೂರ್ಣಗೊಳಿಸುವಂತೆ ಬಾರ್ಡರ್ ರೋಡ್ ಆರ್ಗನೈಸೇಷನ್ಗೆ ಪ್ರಧಾನಿ ಸೂಚಿಸಿದ್ದಾರೆ.
ಸರ್ವ ಋತು ರಸ್ತೆ ಎಂದೇ ಹೆಸರಿರುವ ದಾರ್ಚಾ-ಪದಂ- ನಿಮು ರಸ್ತೆಯ ಶಿಂಕು-ಲಾ ಬಳಿ ನಿರ್ಮಾಣವಾಗಲಿರುವ ಈ ಸುರಂಗ ಮಾರ್ಗದ ಕಾಮಗಾರಿಯನ್ನು ಶೀಘ್ರ ಗತಿಯಲ್ಲಿ ಮುಗಿಸಲು ಪೂರಕವೆನಿಸಿದ ಕ್ರಮಗಳನ್ನು ಕೈಗೊಳ್ಳುವಂತೆಯೂ ಪ್ರಧಾನಿ ಮೋದಿ ಅವರು ಬಿಆರ್ಒ ಗೆ ತಿಳಿಸಿದ್ದಾರೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಈ ಬಹುನಿರೀಕ್ಷಿತ ಸುರಂಗ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಬೇಕಾದ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲು ಅವರು ತಿಳಿಸಿದ್ದಾರೆ.
ಶಿಂಕು-ಲಾ ಪಾಸ್ ಸಮೀಪ 16 ಸಾವಿರ ಅಡಿ ಎತ್ತರ, 13.5 ಕಿಮೀ ಉದ್ದದ ಸುರಂಗ ಕಾಮಗಾರಿ ಇದಾಗಿದೆ. ಈ ಮಾರ್ಗವು ದೇಶದ ಭದ್ರತಾ ದೃಷ್ಟಿಯಿಂದ ಮುಖ್ಯವಾಗಲಿದ್ದು, ಭದ್ರತಾ ಪಡೆಗಳಿಗೂ ವರದಾನವಾಗಲಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.