ಮುಂಬೈ: ಮಹಾರಾಷ್ಟ್ರದ ನಾಸಿಕ್ನ ದೇವಲಾಲಿಯ ಸೈನಿಕ ತರಬೇತಿ ಶಾಲೆ ಸೇರಿದಂತೆ ಇನ್ನಿತರ ಸೈನ್ಯಕ್ಕೆ ಸಂಬಂಧಿಸಿದ ಸೂಕ್ಷ್ಮ ಪ್ರದೇಶಗಳ ಫೋಟೋ, ವಿಡಿಯೋಗಳನ್ನು ತೆಗೆದು ಪಾಕಿಸ್ಥಾನ ವಾಟ್ಸಾಪ್ ಗ್ರೂಪ್ಗೆ ರವಾನಿಸುತ್ತಿದ್ದ ದ್ರೋಹಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸಂಜೀವ್ ಕುಮಾರ್(21) ಎಂದು ಗುರುತಿಸಲಾಗಿದೆ. ಈತ ಬಿಹಾರದ ಗೋಪಾಲಗಂಜ್ ಜಿಲ್ಲೆಯವನಾಗಿದ್ದು ಮಹಾರಾಷ್ಟ್ರದ ದೇವಲಾಲಿಯಲ್ಲಿನ ಸೇನಾ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕನಾಗಿದ್ದನು. ಈತ ಸಮೀಪದ ರೈಲು ನಿಲ್ದಾಣದ ಪಕ್ಕ ವಾಸ್ತವ್ಯ ಹೂಡಿದ್ದ ಎಂದೂ ವರದಿಗಳು ಹೇಳಿವೆ.
ಈತ ದೇವಲಾಲಿಯಲ್ಲಿಯ ಸೇನೆಗೆ ಸಂಬಂಧಿಸಿದಂತೆ ಇರುವ ಸೇನಾ ಪ್ರದೇಶ, ತರಬೇತಿ ಶಾಲೆ, ರಕ್ಷಣಾ ವಸತಿ ಸಮುಚ್ಚಯ ಮೊದಲಾದವುಗಳನ್ನು ರಹಸ್ಯವಾಗಿ ಚಿತ್ರೀಕರಿಸಿ, ಫೋಟೋ ತೆಗೆದು ಪಾಕಿಸ್ಥಾನ ವಾಟ್ಸಾಪ್ ಗ್ರೂಪ್ಗೆ ರವಾನಿಸುತ್ತಿದ್ದನು. ಈತನ ಈ ಚಟುವಟಿಕೆಗಳ ಮೇಲೆ ಸಂಶಯ ಬಂದು ಸೈನಿಕರು ಈತನ ಚಲನವಲನ ಗಮನಿಸಿ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಈತನ ಮೊಬೈಲ್ ಪರಿಶೀಲನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಈತ ಆ ಪ್ರದೇಶದ ಫೋಟೋ, ವಿಡಿಯೋಗಳನ್ನು ಪಾಕಿಸ್ಥಾನ ವಾಟ್ಸಾಪ್ ಗ್ರೂಪ್ಗೆ ರವಾನಿಸಿದ ವಿಚಾರ ಬಯಲಾಗಿದೆ.
ಈತನನ್ನು ದೇವಲಾಲಿಯ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಸೇನಾಧಿಕಾರಿಗಳ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.