ವಾಲೋಪ್ಸ್ ಐಸ್ಲ್ಯಾಂಡ್: ಭಾರತೀಯ ಸಂಜಾತೆ, ಅಮೆರಿಕಾದ ನಾಸಾ ಗಗನಯಾತ್ರಿ ದಿವಂಗತ ಕಲ್ಪನಾ ಚಾವ್ಲಾ ಅವರ ಹೆಸರಿನ ವಾಣಿಜ್ಯ ಸರಕು ಬಾಹ್ಯಾಕಾಶ ನೌಕೆಯನ್ನು ಗುರುವಾರ ರಾತ್ರಿ ಯಶಸ್ವಿಯಾಗಿ ಉಡಾವರಣೆಗೊಳಿಸಲಾಗಿದೆ ಎಂದು ನಾಸಾ ಮೂಲಗಳು ತಿಳಿಸಿವೆ.
ವಾಣಿಜ್ಯ ಸರಕು ಬಾಹ್ಯಾಕಾಶ ನೌಕೆಗೆ ʼಎಸ್.ಎಸ್ ಕಲ್ಪನಾ ಚಾವ್ಲಾʼ ಎಂದು ಹೆಸರಿಸಲಾಗಿದೆ. ವರ್ಜಿನಿಯಾದಲ್ಲಿನ ನಾಸಾದ ವಾಲೋಪ್ಸ್ ಫ್ಲೈಟ್ ಫೆಸಿಲಿಟಿಯಲ್ಲಿ ಮಿಡ್ ಅಟ್ಲಾಂಟಿಕ್ ರೀಜಿನಲ್ ಸ್ಪೇಸ್ಪೋರ್ಟ್(MARS) ಮೂಲಕ ಈ ಬಾಹ್ಯಾಕಾಶ ನೌಕೆಯನ್ನು ಉಡಾವಣೆಗೊಳಿಸಲಾಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇದು ತಲುಪಲಿದೆ.
ಎನ್ಜಿ -14 ಕಾರ್ಯಾಚರಣೆಯಲ್ಲಿ, ಎಸ್.ಎಸ್. ಕಲ್ಪನಾ ಚಾವ್ಲಾ ಸುಮಾರು 3,630 ಕಿಲೋಗ್ರಾಂಗಳಷ್ಟು ಸರಕುಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿಸಲಿದೆ.
ನಾಸಾ ಕೇಂದ್ರ ಕಚೇರಿಯ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ನಿರ್ದೇಶಕ ರಾಬಿನ್ ಗ್ಯಾಟೆನ್ಸ್ ಅವರ ಪ್ರಕಾರ, ಈ ವಿಮಾನವು ಸಂಸ್ಕರಿಸಿದ ಮೂಲಂಗಿ ಮತ್ತು 3 ಡಿ ಕ್ಯಾಮೆರಾ ಸೇರಿದಂತೆ 6,000 ಪೌಂಡ್ ಸರಕುಗಳನ್ನು ಸಾಗಿಸುತ್ತಿದೆ.
ಭಾರತ ಸಂಜಾತ ಮೊದಲ ಮಹಿಳಾ ಗಗನಯಾತ್ರಿ ಹಾಗೂ ಅಮೆರಿಕನ್ ಪ್ರಜೆಯಾಗಿದ್ದ ಕಲ್ಪನಾ ಚಾವ್ಲಾ ಅವರು ಅಂತರಿಕ್ಷ ನೌಕೆ ಕೊಲಂಬಿಯಾ ಭೂವಾತಾವರಣದಲ್ಲಿ ಸುಟ್ಟು ಭಸ್ಮವಾದಾಗ ಮಡಿದ ಏಳು ಗಗನಯಾತ್ರಿಗಳಲ್ಲಿ ಒಬ್ಬರು. 1962r ಮಾರ್ಚ 17 ರಂದು ಹರಿಯಾಣದಲ್ಲಿನ ಕರ್ನಾಲ್ ಎಂಬ ಊರಿನಲ್ಲಿ ಜನಿಸಿದ ಕಲ್ಪನಾ ಚಾವ್ಲ, 1982ರಲ್ಲಿ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಮ್ಮ ಪದವಿಯ ಶಿಕ್ಷಣ ಮುಗಿಸಿದರು. ನಂತರ ಸ್ನಾತಕೋತ್ತರ ಶಿಕ್ಷಣವನ್ನು ಅಮೇರಿಕಾದಲ್ಲಿ ಅಧ್ಯಯನ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.