ಶಿಮ್ಲಾ: ಎಂಜಿನಿಯರಿಂಗ್ ಅದ್ಭುತ ಎಂದೇ ಪರಿಗಣಿಸಲಾಗಿರುವ ಅತೀ ಎತ್ತರದಲ್ಲಿರುವ ವಿಶ್ವದ ಅತೀ ಉದ್ದದ ಹೆದ್ದಾರಿ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ್ದಾರೆ.
ಹಿಮಾಚಲಪ್ರದೇಶದ ಲೇಹ್-ಮನಾಲಿಯನ್ನು ಸಂಪರ್ಕಿಸುವ ಈ ಸುರಂಗ ಮಾರ್ಗ ಸಮುದ್ರ ಮಟ್ಟದಿಂದ ಮೂರು ಸಾವಿರ ಮೀಟರ್ ಎತ್ತರದಲ್ಲಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಇದನ್ನು ನಿರ್ಮಾಣ ಮಾಡಲಾಗಿದೆ. 9.02 ಕಿಲೋಮೀಟರ್ ಉದ್ದದ ಸುರಂಗ ಮಾರ್ಗ ಇದಾಗಿದೆ.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ವೇಳೆ ಈ ಸುರಂಗ ಮಾರ್ಗವನ್ನು ಯೋಜಿಸಲಾಗಿತ್ತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಇದರ ಕಾಮಗಾರಿ ವೇಗವನ್ನು ಪಡೆದುಕೊಂಡು ಇಂದು ಲೋಕಾರ್ಪಣೆಗೊಂಡಿದೆ.
ಈ ವೇಳೆ ಮಾತನಾಡಿದ ಮೋದಿ, “ಈ ಸುರಂಗದಿಂದ ಮನಾಲಿ ಮತ್ತು ಕಿಲಾಂಗ್ ನಡುವಿನ ದೂರ 3-4 ಗಂಟೆಗಳಷ್ಟು ಕಡಿಮೆಯಾಗಲಿದೆ. ಲೇಹ್, ಲಡಾಖ್ನ ರೈತರು, ತೋಟಗಾರರು ಮತ್ತು ಯುವಕರಿಗೆ ರಾಷ್ಟ್ರರಾಜಧಾನಿ ದೆಹಲಿ ಮತ್ತು ಇತರ ಮಾರುಕಟ್ಟೆಗಳಿಗೆ ತಲುಪುದು ಇನ್ನು ಮುಂದೆ ಸುಲಭವಾಗಲಿದೆ.ಅಟಲ್ ಸುರಂಗ ಭಾರತದ ಗಡಿ ಮೂಲಸೌಕರ್ಯಕ್ಕೆ ಹೊಸ ಶಕ್ತಿಯನ್ನು ನೀಡಲಿದೆ. ಇದು ವಿಶ್ವದರ್ಜೆಯ ಗಡಿ ಸಂಪರ್ಕಕ್ಕೆ ಜೀವಂತ ಉದಾಹರಣೆಯಾಗಿದೆ. ಹಿಮಾಲಯದ ಭಾಗವಾಗಿರಲಿ, ಪಶ್ಚಿಮ ಭಾರತದ ಮರುಭೂಮಿಯ ವಿಸ್ತಾರವಾಗಿರಲಿ ಅಥವಾ ದಕ್ಷಿಣ ಮತ್ತು ಪೂರ್ವ ಭಾರತದ ಕರಾವಳಿ ಪ್ರದೇಶವಾಗಲಿ, ಇದು ದೇಶದ ಸುರಕ್ಷತೆ ಮತ್ತು ಸಮೃದ್ಧಿಯ ದೊಡ್ಡ ಸಂಪನ್ಮೂಲವಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.