ನವದೆಹಲಿ: ಫಲಾ-ಎ-ಇನ್ಸಾನಿಯತ್ ಫೌಂಡೇಷನ್ ಎಂಬ ಭಯೋತ್ಪಾದಕ ಸಂಘಟನೆಗೆ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಲಷ್ಕರ್-ಇ-ತೋಯ್ಬಾದ ಮುಖ್ಯಸ್ಥ ಮೊಹಮ್ಮದ್ ಹಫೀಜ್ ಸಯೀದ್ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ.
ಇವನೊಂದಿಗೆ ಈತನ ಸಹಚರ ಶಹೀದ್ ಮೊಹಮ್ಮದ್, ದುಬೈನ ಫಂಡ್ನ ಮ್ಯಾನೇಜರ್ ಮೊಹಮ್ಮದ್ ಸಲ್ಮಾನ್, ನವದೆಹಲಿಯ ಹವಾಲಾ ಆಪರೇಟರ್ ಮೊಹಮ್ಮದ್ ಸಲೀಂ ಹೆಸರನ್ನೂ ಇಡಿ ಅಧಿಕಾರಿಗಳು ಈ ಚಾರ್ಜ್ ಶೀಟ್ನಲ್ಲಿ ಉಲ್ಲೇಖ ಮಾಡಿದ್ದಾರೆ. ಎಫ್ಐಎ ಜಮಾತ್ ಉದ್ ದಾವಾದಿಂದ ಸ್ಥಾಪಿತವಾದ ಪಾಕಿಸ್ಥಾನ ಮೂಲದ ಫೌಂಡೇಶನ್ ಆಗಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಮಾತ್ ಉದ್ ದಾವಾ ಭಯೋತ್ಪಾದನ ಸಂಘಟನೆ ಲಷ್ಕರ್ ಇ ತೈಬಾದ ಅಂಗಸಂಸ್ಥೆಯಾಗಿದೆ.
ಎಫ್ಐಎಯನ್ನು 2012 ರಲ್ಲಿ ವಿಶ್ವಸಂಸ್ಥೆ ಭಯೋತ್ಪಾದಕ ಸಂಘಟನೆ ಎಂದು ಗುರುತಿಸಿದೆ. ಭಾರತವೂ 2016 ರಲ್ಲಿ ಇದನ್ನು ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ ಭಯೋತ್ಪಾದನಾ ಸಂಘಟನೆ ಎಂದು ಪರಿಗಣಿಸಿದೆ. ಎಲ್ಇಟಿ ಈ ಸಂಘಟನೆಯನ್ನು ಉಗ್ರ ಚಟುವಟಿಕೆಗೆ ಬಳಕೆ ಮಾಡಿಕೊಳ್ಳುತ್ತಿದೆ ಎಂದೂ ಅಧಿಕಾರಿಗಳು ಈ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.