ನವದೆಹಲಿ: ವಿದೇಶಿ ವ್ಯಾಪಾರಕ್ಕೆ ಅನುಕೂಲವಾಗುವಂತೆ ಭಾರತ ಸರ್ಕಾರದ ಒಡೆತನದ ಎಕ್ಸಿಮ್ ಬ್ಯಾಂಕ್ 2019 ರ ಮಾರ್ಚ್ನಲ್ಲಿ ಅಭಿವೃದ್ಧಿ ಯೋಜನೆಗಳಿಗಾಗಿ ಮಾಲ್ಡೀವ್ಸ್ಗೆ 800 ಮಿಲಿಯನ್ ಡಾಲರ್ ನೀಡುವ ವಾಗ್ದಾನ ನೀಡಿತ್ತು. ಸೆಪ್ಟೆಂಬರ್ನಲ್ಲಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಈ ದ್ವೀಪ ರಾಷ್ಟ್ರಕ್ಕೆ ಕೋವಿಡ್ ಸವಾಲು ಎದುರಿಸಲು ಮತ್ತೊಂದು $ 250 ಮಿಲಿಯನ್ ಸಾಲವನ್ನು ವಿಸ್ತರಿಸಿತು.
2019 ರಲ್ಲಿ ದೇಶಕ್ಕೆ ವಾಗ್ದಾನ ಮಾಡಿದ ನಿಧಿಗೆ ಅನುಗುಣವಾಗಿ ಭಾರತವು 22,000 ಆಸನಗಳ ಕ್ರಿಕೆಟ್ ಕ್ರೀಡಾಂಗಣ ಮತ್ತು 100 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆಯನ್ನು ಮಾಲ್ಡೀವ್ಸ್ನ ಹುಲ್ಹುಮಾಲೆಯಲ್ಲಿ ನಿರ್ಮಿಸಲಿದೆ. ಈ ಯೋಜನೆಗಳ ಕುರಿತು ಚರ್ಚಿಸಲು ಮಾಲ್ಡೀವ್ಸ್ನ ಭಾರತದ ಹೈ ಕಮಿಷನರ್ ಸಂಜಯ್ ಸುಧೀರ್ ಅವರು ಮಾಲ್ಡೀವ್ಸ್ ಹೌಸಿಂಗ್ ಡೆವಲಪ್ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ ಮುಖ್ಯಸ್ಥ ಮೊಹಮ್ಮದ್ ಜೈಶ್ ಇಬ್ರಾಹಿಂ ಅವರ ಜೊತೆಗೆ ಮಂಗಳವಾರ ಸಭೆ ನಡೆಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಭಾರತದ ಮಾಲ್ಡೀವ್ಸ್ ರಾಯಭಾರ ಕಛೇರಿ, “ಮಾಲ್ಡೀವ್ಸ್ಗೆ ವಿಸ್ತರಿಸಲಾದ 800 ಮಿಲಿಯನ್ ಯುಎಸ್ಡಿ ಲೈನ್ ಕ್ರೆಡಿಟ್ ಅಡಿಯಲ್ಲಿ 100 ಹಾಸಿಗೆಗಳ ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆಯನ್ನು ಹುಲ್ಹುಮಾಲೆನಲ್ಲಿ ಸ್ಥಾಪಿಸಲಾಗುವುದು. ಈ ಯೋಜನೆಯು ಆರೋಗ್ಯ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವೆ ನಿಕಟ ದ್ವಿಪಕ್ಷೀಯ ಸಹಕಾರವನ್ನು ನಿರ್ಮಿಸುತ್ತದೆ” ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.