ನವದೆಹಲಿ: ದೇಶದ ಪ್ರಸಿದ್ಧ ಕಂಪೆನಿ ಮಹೀಂದ್ರಾ, ನೂತನ ಎಸ್ಯುವಿ ಥಾರ್-2020 ಯನ್ನು ಬಿಡುಗಡೆ ಮಾಡಿದೆ.
ಈ ಮಹೀಂದ್ರಾ ಥಾರ್ ಎಎಕ್ಸ್ ಮಾದರಿಯ ಬೆಲೆಯನ್ನು ಸಂಸ್ಥೆ ಬಹಿರಂಗ ಮಾಡಿದ್ದು, 9.8 ಲಕ್ಷದಿಂದ ತೊಡಗಿದಂತೆ 12.2 ಲಕ್ಷಗಳಿಗರ ಸಿಗುತ್ತವೆ ಎಂದು ಮಾಹಿತಿ ನೀಡಿದೆ. ಕಳೆದ ಆಗಸ್ಟ್ 15 ರಂದು ಸಂಸ್ಥೆಯ ಸೆಕೆಂಡ್ ಜನರೇಶನ್ನ ಥಾರ್ನ ಬೆಲೆಯ ಹೊರತಾಗಿ ಉಳಿದೆಲ್ಲ ಮಾಹಿತಿಗಳನ್ನು, ವಾಹನದ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಇರುವ ಎಲ್ಲಾ ವಿಚಾರಗಳ ಮಾಹಿತಿಯನ್ನು ಮಹೀಂದ್ರಾ ನೀಡಿತ್ತು.
ಎಲ್ಲಾ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಐಶಾರಾಮಿ ಎಲ್ಎಕ್ಸ್ ಮಾದರಿಯ ಹಾರ್ಡ್ ಟಾಪ್ ಕನ್ವರ್ಟೇಬಲ್ ಥಾರ್ ಗೆ 12.49 ಲಕ್ಷ ರೂ. ಬೆಲೆ ನಿಗದಿ ಮಾಡಲಾಗಿದೆ. ಡಿಸೇಲ್ ಮಾದರಿಯ ವಾಹನಕ್ಕೆ 12.95 ಲಕ್ಷ ರೂ. ಬೆಲೆಯನ್ನು ಸಂಸ್ಥೆ ನಿಗದಿ ಮಾಡಿದೆ.
ನೂತನ ಥಾರ್ನ ಪ್ರಥಮ ಯೂನಿಟ್ ಅನ್ನು ಹರಾಜು ಪ್ರಕ್ರಿಯೆಯಲ್ಲಿ 1.10 ಕೋಟಿ ರೂ. ಗಳಿಗೆ ಸಂಸ್ಥೆ ಹರಾಜು ಮಾಡಿದೆ. ಇದನ್ನು ನವದೆಹಲಿ ಮೂಲದ ಆಕಾಶ್ ಮಿಂದ್ ಎಂಬವರು ಪಡೆದುಕೊಂಡಿದ್ದಾರೆ. ಇನ್ನು ಈ ನೂತನ ಥಾರ್ ಖರೀದಿಗೆ ಸಂಸ್ಥೆ ಬುಕಿಂಗ್ ಸಹ ಆರಂಭ ಮಾಡಿದ್ದು, ಈ ತಿಂಗಳಾಂತ್ಯಕ್ಕೆ ಬುಕಿಂಗ್ ಮಾಡಿದ ಗ್ರಾಹಕರನ್ನು ಥಾರ್ ಸೇರಲಿದೆ ಎಂದೂ ಸಂಸ್ಥೆ ತಿಳಿಸಿದೆ.
ಇದರ ಗುಣಲಕ್ಷಣಗಳನ್ನು ಹೇಳುವುದಾದರೆ, ಈ ಹೊಸ ಥಾರ್ನ ಒಳ, ಹೊರ ವಿನ್ಯಾಸಗಳು ಸಂಪೂರ್ಣ ಬದಲಾಗಿದೆ. ಜೊತೆಗೆ ಸಿಕ್ಸ್ ಸ್ಪೀಡ್ ಮ್ಯಾನ್ಯುಅಲ್ ಮತ್ತು ಅಟೋಮೆಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳನ್ನು ನೀಡಲಾಗಿದೆ. ಬಿಎಸ್ 6 ಎಂಜಿನ್, 2.0 ಲೀ. ಪೆಟ್ರೋಲ್, 2.2 ಲೀ. ಡಿಸೇಲ್ ಎಂಜಿನ್ ಅನ್ನು ಈ ವಾಹನ ಹೊಂದಿದೆ. ಡಿಸೇಲ್ ಎಂಜಿನ್ನಲ್ಲಿ 120 ಎಚ್ಪಿ ಮತ್ತು ಪೆಟ್ರೋಲ್ ಎಂಜಿನ್ ನಲ್ಲಿ 150 ಎಚ್ಪಿ ಪವರ್ ಸಾಮರ್ಥ್ಯ ಹೊಂದಿದೆ. ಹೊಸ ಗಿಯರ್ ಬಾಕ್ಸ್, 4 ಫ್ರಂಟ್ ಫೇಸಿಂಗ್ ಆಸನ ವ್ಯವಸ್ಥೆ, 2+4 ಸೈಡ್ ಫೇಸಿಂಗ್ ಸೀಟುಗಳನ್ನು ಒಳಗೊಂಡಿದೆ. 17.8 ಇಂಚುಗಳ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ, ರೂಫ್ ಮೌಂಟೆಡ್ ಸ್ಪೀಕರ್, ಡ್ಯುಯೆಲ್ ಏರ್ ಬ್ಯಾಗ್ಗಳನ್ನು ಈ ನೂತನ ಮಹೀಂದ್ರಾ ಥಾರ್ 2020 ಒಳಗೊಂಡಿದೆ.
The wait is over!
Book #TheAllNewThar today and gear up to #ExploreTheImpossible
Link: https://t.co/A7rYBLwkNK#MahindraThar pic.twitter.com/6uYileTGNP— Mahindra Thar (@Mahindra_Thar) October 2, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.