ನವದೆಹಲಿ: ಇಂದು ಬೆಳಿಗ್ಗೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅರ್ಜುನ್ ಟ್ಯಾಂಕ್ನಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲೇಸರ್ ಗೈಡೆಡ್ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
ಕಳೆದ ಒಂಬತ್ತು ದಿನಗಳಲ್ಲಿ ಡಿಆರ್ಡಿಒ ನಡೆಸಿದ ಎರಡನೇ ಕ್ಷಿಪಣಿ ಪರೀಕ್ಷೆ ಇದಾಗಿದೆ. ಮಹಾರಾಷ್ಟ್ರದ ಅಹ್ಮದ್ನಗರದ ಭಾರತೀಯ ಸೇನೆಯ ಫೈರಿಂಗ್ ರೇಂಜ್ನಲ್ಲಿ ಪರೀಕ್ಷೆ ನಡೆಸಲಾಯಿತು.
“ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು, ದೂರದ ವ್ಯಾಪ್ತಿಯಲ್ಲಿರುವ ಗುರಿಯನ್ನು ಇದು ಸೋಲಿಸಿತು” ಎಂದು ಡಿಆರ್ಡಿಒ ಪರೀಕ್ಷೆಯ ನಂತರ ಟ್ವೀಟ್ನಲ್ಲಿ ತಿಳಿಸಿದೆ.
ಡಿಆರ್ಡಿಒ ಸೆಪ್ಟೆಂಬರ್ 23 ರಂದು ಟ್ಯಾಂಕ್ ವಿರೋಧಿ ಕ್ಷಿಪಣಿಯನ್ನು ಪರೀಕ್ಷಿಸಿತ್ತು.
“ಸ್ಫೋಟಕ ರಿಯಾಕ್ಟಿವ್ ಆರ್ಮರ್ [ERA]] ರಕ್ಷಿತ ಶಸ್ತ್ರಸಜ್ಜಿತ ವಾಹಕಗಳನ್ನು ಸೋಲಿಸಲು ಈ ಕ್ಷಿಪಣಿಯು ಹೈ-ಎಕ್ಸ್ಪ್ಲೋಸಿವ್ ಯ್ಯಾಂಟಿ ಟ್ಯಾಂಕ್ [HEAT] ಸಿಡಿತಲೆಗಳನ್ನು ಬಳಸಿಕೊಳ್ಳುತ್ತದೆ” ಎಂದು ಡಿಆರ್ಡಿಒ ಪರೀಕ್ಷೆಯ ನಂತರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
Laser Guided Anti Tank Guided Missile was successfully tested, defeating a target located at longer range. The test was conducted from MBT Arjun at KK Ranges (ACC&S) Ahmednagar today in continuation of successful trial done on 22nd sep 2020. pic.twitter.com/U3TVWsDG0y
— DRDO (@DRDO_India) October 1, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.