ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚಿಗಷ್ಟೇ ಜಾರಿಗೆ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬಗೆಗೆ ಕೇಂದ್ರ ಸರ್ಕಾರ ಸ್ಪರ್ಧೆಯೊಂದನ್ನು ಆಯೋಜನೆ ಮಾಡಿದೆ.
ಭಾರತದ ಶೈಕ್ಷಣಿಕ ಪರಿವರ್ತನೆಯಲ್ಲಿ ನಾಗರಿಕರನ್ನು, ವಿದ್ಯಾರ್ಥಿಗಳನ್ನು ಪಾಲ್ಗೊಳ್ಳುವಂತೆ ಮಾಡುವ ಸಲುವಾಗಿ ಈ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ.
ಮೂರು ವಿಭಾಗಗಳಲ್ಲಿ MyNEP ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. 9-12 ತರಗತಿ ಮಕ್ಕಳಿಗೆ ಒಂದು ವಿಭಾಗ, ಪದವಿಪೂರ್ವ ಮತ್ತು ಅದಕ್ಕಿಂತ ಮೇಲಿನ ವಿದ್ಯಾರ್ಥಿಗಳಿಗೆ ಒಂದು ವಿಭಾಗ ಮತ್ತು ನಾಗರಿಕರ ಒಂದು ವಿಭಾಗ. ನಾಗರಿಕರ ವಿಭಾಗದಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದಾಗಿದೆ.
ಇದರಲ್ಲಿ ಭಾಗಿಯಾಗಲು ಆಸಕ್ತಿ ಇರುವವರು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ಗೆ https://mynep.in ಭೇಟಿ ಕೊಡಬಹುದಾಗಿದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, “ಭಾರತದ ಶೈಕ್ಷಣಿಕ ಪರಿವರ್ತನೆಯಲ್ಲಿ ನೀವು ಪಾಲ್ಗೊಳ್ಳಿರಿ. #ನನ್ನ_ಎನ್ಇಪಿ #MyNEP ಸ್ಪರ್ಧೆಯು ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಬಗ್ಗೆ ಅನನ್ಯ ಅಂಶಗಳನ್ನು ಹಂಚಿಕೊಳ್ಳುವ ಪ್ರಯತ್ನವಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು https://www.mynep.in/nep_fe/en/home ಕ್ಲಿಕ್ ಮಾಡಿ ” ಎಂದಿದ್ದಾರೆ.
MyNEP Competition is an interesting way of sharing unique aspects about the National Education Policy 2020.
Participate in the competition at https://t.co/IoxjJvaXdL.
Be a part of the educational transformation of India! #NewNEPNewIndia pic.twitter.com/ihV682wmVl
— Narendra Modi (@narendramodi) October 1, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.