ಬೆಂಗಳೂರು: ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿ ಅವರು ತಮ್ಮ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ದೇಶೀಯವಾಗಿ ಆಟಿಕೆಗಳನ್ನು ತಯಾರಿಸುವ ಮೂಲಕ ಸ್ವಾವಲಂಬಿ ರಾಷ್ಟ್ರ ನಿರ್ಮಾಣ, ಆತ್ಮ ನಿರ್ಭರ ಭಾರತಕ್ಕೆ ಸಂಬಂಧಿಸಿದಂತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದರು. ಇದೀಗ ದೇಶದ ಹನ್ನೆರಡು ರಾಜ್ಯಗಳಿಗೆ ಸಂಬಂಧಿಸಿದಂತಹ ಟ್ರೇಡ್ಮಾರ್ಕ್ ಆಟಿಕೆಗಳನ್ನು ಒಳಗೊಂಡ ವಿಶೇಷ ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡಲು ಪೋಸ್ಟ್ ಕ್ರಾಸಿಂಗ್ ಸೊಸೈಟಿ ಆಫ್ ಇಂಡಿಯಾ ಸಿದ್ಧವಾಗಿದೆ.
151ನೇ ವಿಶ್ವ ಅಂಚೆಕಾರ್ಡ್ ದಿನಾಚರಣೆಯ ಅಂಗವಾಗಿ ಇಂದು ಕರ್ನಾಟಕದ ಚೆನ್ನಪಟ್ಟಣದ ಗೊಂಬೆಗಳ ಆಟಿಕೆಗಳ ಚಿತ್ರವಿರುವ ಅಂಚೆ ಲಕೋಟೆಗಳ ಜೊತೆಗೆ ಒಟ್ಟು 12 ರಾಜ್ಯದ ಫೇಮಸ್ ಆಟಿಕೆಗಳ ಅಂಚೆ ಲಕೋಟೆಯನ್ನು ಪೋಸ್ಟ್ ಕ್ರಾಸಿಂಗ್ ಸೊಸೈಟಿ ಆಫ್ ಇಂಡಿಯಾ ಬಿಡುಗಡೆ ಮಾಡಲಿದೆ. ಟಾಯ್ಸ್ ಆಫ್ ಇಂಡಿಯಾ ವಿಷಯದ ಮೇಲೆ ಭಾರತೀಯ ಸಾಂಪ್ರದಾಯಿಕ ಆಟಿಕೆಗಳ ಚಿತ್ರವಿರುವ ಅಂಚೆ ಲಕೋಟೆಗಳನ್ನು ಬೆಂಗಳೂರು ಜನರಲ್ ಅಂಚೆ ಕಛೇರಿಯಲ್ಲಿ ಸಂಸ್ಥೆ ಬಿಡುಗಡೆ ಮಾಡಲಿದೆ.
ಚೆನ್ನ ಪಟ್ಟಣ ಗೊಂಬೆಗಳ ಚಿತ್ರವಿರುವ ಈ ವಿಶೇಷ ಅಂಚೆ ಲಕೋಟೆಗಳನ್ನು ಕರ್ನಾಟಕ ವಲಯ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್ ಬಿಡುಗಡೆ ಮಾಡಲಿದ್ದಾರೆ. ಆಯಾಯ ರಾಜ್ಯಗಳಿಗೆ ಸಂಬಂಧಿಸಿದಂತೆ ಇರುವ ಚಿತ್ರಗಳ ಅಂಚೆ ಲಕೋಟೆಗಳನ್ನು ಆಯಾಯ ರಾಜ್ಯದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ಗಳೇ ಬಿಡುಗಡೆ ಮಾಡಲಿದ್ದಾರೆ.
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಸಂಸ್ಥೆಯ ಸದಸ್ಯ ಅಖಿಲೇಶ್ ಕುಮಾರ್, ಈ ಹಿಂದಿನಂತೆಯೇ ದೇಶದ ಪ್ರಮುಖ ವಿಚಾರಗಳನ್ನು ಜನರಿಗೆ ತಲುಪಿಸುವ ಮತ್ತು ಅವುಗಳನ್ನು ಉತ್ತೇಜಿಸುವ ಕೆಲಸವನ್ನು ಪೋಸ್ಟಲ್ ಡಿಪಾರ್ಟ್ಮೆಂಟ್ ಮಾಡುತ್ತಲೇ ಬಂದಿದೆ. ಈ ಬಾರಿ ದೇಶದ ವಿವಿಧ ರಾಜ್ಯಗಳ ಪಾರಂಪರಿಕ ಆಟಿಕೆಗಳನ್ನು ಉತ್ತೇಜಿಸುವ ಮತ್ತು ಪರಿಚಯಿಸುವ ನಿಟ್ಟಿನಲ್ಲಿ ಈ ವಲಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.