ನವದೆಹಲಿ: ದೇಶದ ಐದನೇ ತಲೆಮಾರಿನ ಸುಧಾರಿತ ಮಧ್ಯಮ ಯುದ್ಧ ವಿಮಾನಗಳಿಗೆ (fifth generation advanced medium combat aircraft) ಶಕ್ತಿಯನ್ನು ತುಂಬಬಲ್ಲ ಮೊದಲ ದೇಶೀಯ ಜೆಟ್ ಎಂಜಿನ್ ಪಡೆಯುವ ಸನಿಹದಲ್ಲಿದೆ ಭಾರತ.
ವರದಿಯ ಪ್ರಕಾರ, ಡಿಆರ್ಡಿಒ ಫ್ರಾನ್ಸ್ನೊಂದಿಗೆ ಮಾಡಿಕೊಂಡ ರಫೇಲ್ ಫೈಟರ್ ಒಪ್ಪಂದದ ಆಫ್ಸೆಟ್ ಷರತ್ತು ಅಡಿಯಲ್ಲಿ ಹೊಸ ಫೈಟರ್ ಜೆಟ್ ಎಂಜಿನ್ ಸಂಕೀರ್ಣವನ್ನು ಭಾರತದಲ್ಲಿ ನಿರ್ಮಾಣ ಮಾಡಲು ಯೋಜಿಸಲಾಗುತ್ತಿದೆ.
ಭಾರತದ ಭವಿಷ್ಯದ ಫೈಟರ್ ಜೆಟ್ಗಳಿಗಾಗಿ ಹೊಚ್ಚ ಹೊಸದು 110 ಕಿಲೋ ನ್ಯೂಟನ್ ಎಂಜಿನ್ ಅನ್ನು ನಿರ್ಮಿಸಲು ಡಿಆರ್ಡಿಒ ಮಾತುಕತೆಯನ್ನು ನಡೆಸುತ್ತಿದ್ದು, ಭವಿಷ್ಯದ ಸುಧಾರಿತ ಮಧ್ಯಮ ಯುದ್ಧ ವಿಮಾನಗಳಿಗೆ (ಎಎಂಸಿಎ) ಶಕ್ತಿ ತುಂಬಲು ಇದರಿಂದ ಸಾಧ್ಯವಾಗಲಿದೆ. ಪ್ರಕ್ರಿಯೆ ಪ್ರಾರಂಭವಾದ ಏಳು ವರ್ಷಗಳ ನಂತರ ಎಂಜಿನ್ ಸಿದ್ಧವಾಗಬಹುದು ಎನ್ನಲಾಗಿದೆ.
ಭಾರತದ 5 ನೇ ತಲೆಮಾರಿನ ಯುದ್ಧವಿಮಾನಗಳಿಗೆ ದೇಶೀಯ ಎಂಜಿನ್ನೊಂದಿಗೆ ಶಕ್ತಿ ತುಂಬುವ ಈ ಯೋಜನೆಯು ಸ್ವಾವಲಂಬನೆಯನ್ನು ಸಾಧಿಸುವ ಭಾರತೀಯ ವಾಯುಪಡೆಯ (ಐಎಎಫ್) ಬೇಡಿಕೆಗೆ ಅನುಗುಣವಾಗಿದೆ.
ಫ್ರೆಂಚ್ ಜೆಟ್ ಎಂಜಿನ್ ತಯಾರಕ ಸಫ್ರಾನ್ ಎಂಜಿನ್ ಈ ಕಾರ್ಯದಲ್ಲಿ ಭಾರತಕ್ಕೆ ನೆರವಾಗಲು ಸಂಪೂರ್ಣ ತಂತ್ರಜ್ಞಾನ ವರ್ಗಾವಣೆಯನ್ನು ನೀಡಲು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. ಡಿಆರ್ಡಿಒ ಯೋಜಿಸಿರುವ ಎಂಜಿನ್ ಸಂಕೀರ್ಣವು ಉನ್ನತ-ಮಟ್ಟದ ಫೈಟರ್ ಜೆಟ್ ಎಂಜಿನ್ಗಳನ್ನು ಪೂರೈಸಲಿದೆ.
ಹೆಚ್ಚಿನ ಒತ್ತಡದ ಎಂಜಿನ್ ತಯಾರಿಕೆಗೆ ತಂತ್ರಜ್ಞಾನವನ್ನು ಒದಗಿಸಲು ಸಫ್ರಾನ್ ಎಚ್ಎಎಲ್ನೊಂದಿಗೂ ಕೂಡ ಸಹಕರಿಸುತ್ತಿದೆ
“ಹೆಚ್ಚಿನ ಒತ್ತಡದ ಎಂಜಿನ್ ಉತ್ಪಾದನೆಗೆ ಅಗತ್ಯವಾದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ನಾವು ಸಹಿ ಹಾಕುತ್ತಿದ್ದೇವೆ. ಈ ತಂತ್ರಜ್ಞಾನವು ರಫೇಲ್ ಎಂಜಿನ್ಗಳಿಗೂ ಒಂದೇ ಗಿದೆ ಮತ್ತು 110kn ಎಂಜಿನ್ ಯೋಜನೆಗೆ ಸಹ ಉಪಯುಕ್ತವಾಗಿದೆ” ಎಂದು ಎಚ್ಎಎಲ್ ಅಧ್ಯಕ್ಷ ಆರ್ ಮಾಧವನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.