ಕಠ್ಮಂಡು: ಹಿಂದೂಗಳ ಆರಾಧ್ಯದೇವತೆ ಶ್ರೀರಾಮ ನೇಪಾಳದನು ಎಂದು ಹೇಳಿಕೆ ನೀಡಿ ದೊಡ್ಡ ವಿವಾದವನ್ನು ನೇಪಾಳದ ಪ್ರಧಾನಿ ಕೆಪಿ ಶರ್ಮ ಓಲಿ ಸೃಷ್ಟಿಸಿದ್ದರು. ಇದೀಗ ಅಲ್ಲಿನ ಸ್ಥಳೀಯ ಆಡಳಿತ 40 ಎಕರೆ ಪ್ರದೇಶದಲ್ಲಿ ಆಯೋಧ್ಯಪುರಿ ಧಾಮ ನಿರ್ಮಾಣ ಮಾಡಲು ಮುಂದಾಗಿದೆ.
ನೇಪಾಳದ ಚಿತ್ವಾನ್ ಜಿಲ್ಲೆಯ ಮಡಿ ಮಹಾನಗರ ಪಾಲಿಕೆಯು ಅಯೋಧ್ಯೆಪುರಿ ಧಾಮ ನಿರ್ಮಾಣಕ್ಕೆ ಭೂಮಿಯನ್ನು ಗೊತ್ತುಪಡಿಸುತ್ತಿದೆ. ನೇಪಾಳದ ಪ್ರಧಾನಿ ರಾಮನ ಜನ್ಮಸ್ಥಳ ಎಂದು ಹೇಳಿದ್ದ ಪ್ರದೇಶದಲ್ಲಿ ಅಯೋಧ್ಯೆಪುರಿ ಧಾಮ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ.
ಸೆಪ್ಟೆಂಬರ್ 29ರಂದು ನಡೆದ ಮಹಾನಗರಪಾಲಿಕೆಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ 40 ಎಕರೆ ಭೂಮಿಯನ್ನು ಧಾಮ ನಿರ್ಮಾಣಕ್ಕೆ ಮೀಸಲಿಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ನೇಪಾಳದ ರಾಷ್ಟ್ರೀಯ ಸಂಸ್ಥೆ ವರದಿ ಮಾಡಿದೆ.
ಕಳೆದ ಜುಲೈ 14ರಂದು ಓಲಿ ಅವರು ಶ್ರೀರಾಮ ನೇಪಾಳದವನು ಎಂದು ಹೇಳಿಕೆ ನೀಡುವ ಮೂಲಕ ದೊಡ್ಡ ವಿವಾದವನ್ನು ಸೃಷ್ಟಿ ಮಾಡಿದ್ದರು. ಇದೀಗ ತಮ್ಮ ಆಧಾರರಹಿತ ಹೇಳಿಕೆಯನ್ನೇ ಅವರು ನಿಜ ಮಾಡಿ ತೋರಿಸಲು ಹೊರಟಂತಿದೆ. ಭಾರತ ಸರ್ಕಾರ ಇದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತದೆ ಎಂಬ ಬಗ್ಗೆ ಕಾದು ನೋಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.