ಬೆಂಗಳೂರು: ಮೋಟಾರ್ ವಾಹನದ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿ ರಾಜ್ಯ ಸರ್ಕಾರ ವಾಹನ ಮಾಲಕರ ಮುಖದಲ್ಲಿ ನಗು ಮೂಡಿಸಿದೆ. ವಾಹನ ತೆರಿಗೆ ಇಳಿಕೆಗೆ ಸಂಬಂಧಿಸಿದಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದಾರೆ.
ಕರ್ನಾಟಕ ಮೋಟಾರ್ ವಾಹನಗಳ ತೆರಿಗೆ ಅಧಿನಿಯಮ 1957(ಕರ್ನಾಟಕ ಕಾಯ್ದೆ 35/1957) ಕಲಂ 16(1) ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಮೋಟಾರ್ ವಾಹನಗಳ ಅಧಿನಿಯಮ 1957 ನ ಶೆಡ್ಯೂಲ್ (ಎ) ಐಟಂ ಸಂಖ್ಯೆ: 5(ಎ) (¡¡¡) ಕ್ಕೆ ಅನುಗುಣವಾಗಿ ಈ ಹೊಸ ತೆರಿಗೆಯನ್ನು ಜಾರಿಗೆ ತರಲಾಗಿದೆ.
13-20 ಆಸನಗಳನ್ನು ಹೊಂದಿರುವ ಒಪ್ಪಂದ ವಾಹನಗಳಿಗೆ ಪ್ರತಿ ಆಸನಕ್ಕೆ ಈ ಮೊದಲು ತೆರಬೇಕಾಗಿದ್ದ ತೆರಿಗೆ 900 ರೂ. ಗಳನ್ನು 700 ರೂ. ಗಳಿಗೆ ಇಳಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಮೋಟಾರ್ ವಾಹನಗಳ ತೆರಿಗೆ ಇಳಿಸಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದು, ಇದನ್ನು ಗಮನಿಸಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ರಾಜ್ಯದಲ್ಲಿ 13 ರಿಂದ 20 ಆಸನಗಳ ಸಾಮರ್ಥ್ಯವಿರುವ ಒಪ್ಪಂದ ವಾಹನಗಳಿಗೆ ಪ್ರತಿ ಆಸನಕ್ಕೆ ನಿಗದಿಪಡಿಸಿರುವ ₹ 900 ಮೋಟಾರು ವಾಹನ ತೆರಿಗೆಯನ್ನು ₹ 700 ಕ್ಕೆ ಇಳಿಕೆ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.@CMofKarnataka @BSYBJP @LaxmanSavadi pic.twitter.com/bSlarTasD0
— DIPR Karnataka (@KarnatakaVarthe) September 29, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.