ನವದೆಹಲಿ: ಉತ್ತರ ಅರೇಬಿಯನ್ ಸಮುದ್ರದಲ್ಲಿ ನಡೆಯುತ್ತಿದ್ದ ಭಾರತ-ಜಪಾನ್ ಕಡಲ ದ್ವಿಪಕ್ಷೀಯ ವ್ಯಾಯಾಮದ (JIMEX-ndia-Japan Maritime bilateral exercise) ನಾಲ್ಕನೇ ಆವೃತ್ತಿ ಇಂದು ಮಕ್ತಾಯವಾಗಿದೆ. ಈ ವ್ಯಾಯಾಮವನ್ನು ಭಾರತೀಯ ನೌಕಾಪಡೆ ಮತ್ತು ಜಪಾನಿನ ಮ್ಯಾರಿಟೈಮ್ ಸ್ವರಕ್ಷಣಾ ಪಡೆ (ಜೆಎಂಎಸ್ಡಿಎಫ್) ನಡುವೆ ದ್ವೈವಾರ್ಷಿಕವಾಗಿ ನಡೆಸಲಾಗುತ್ತದೆ.
ಸಿಸಿಎಫ್ 2 ಮತ್ತು ಎಫ್ಒಸಿಡಬ್ಲ್ಯುಎಫ್ ನೇತೃತ್ವದ ಜಪಾನ್ ಮ್ಯಾರಿಟೈಮ್ ಸೆಲ್ಫ್-ಡಿಫೆನ್ಸ್ ಫೋರ್ಸ್ (ಜೆಎಂಎಸ್ಡಿಎಫ್) ಮತ್ತು ಭಾರತೀಯ ನೌಕಾಪಡೆ ನಡುವಿನ 3 ದಿನಗಳ ಅತ್ಯಂತ ಯಶಸ್ವಿ ಸಮರಾಭ್ಯಾಸ ಇಂದು ಪೂರ್ಣಗೊಂಡಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ವಾಯು ವಿರೋಧಿ ಮತ್ತು ಜಲಾಂತರ್ಗಾಮಿ ವಿರೋಧಿ ಯುದ್ಧ ವ್ಯಾಯಾಮಗಳನ್ನು ಉಭಯ ದೇಶಗಳ ನೌಕಾ ಹಡಗುಗಳು ನಡೆಸಿದವು. ವೆಪನ್ ಫೈರಿಂಗ್, ಸೀಮ್ಯಾನ್ಶಿಪ್, ಟ್ರ್ಯಾಕಿಂಗ್ ಮತ್ತು ಯುದ್ಧತಂತ್ರದ ಕುಶಲತೆಯ ಬಗ್ಗೆ ಅಭ್ಯಾಸಗಳನ್ನು ನಡೆಸಲಾಯಿತು.
ಕಣ್ಗಾವಲು ವಿಮಾನ ಮತ್ತು ಹೆಲೋಸ್ JIMEX -2020 (ಭಾರತ-ಜಪಾನ್ ಕಡಲ ದ್ವಿಪಕ್ಷೀಯ ವ್ಯಾಯಾಮ) ಯನ್ನು ಅತ್ಯಂತ ಯಶಸ್ವಿಯಾಗಿ ನಡೆಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ.
‘ಸಂಪರ್ಕವಿಲ್ಲದ’ ಸ್ವರೂಪದಲ್ಲಿ ವ್ಯಾಯಾಮವನ್ನು ನಡೆಸಲಾಯಿತು. ಸಮಾಪಣ ಸಂದರ್ಭದಲ್ಲಿ ಹಡಗುಗಳು ಬೇರ್ಪಡುವ ಮುನ್ನ ಪರಸ್ಪರ ಕೈಬಿಸಿ ವಿದಾಯ ಹೇಳಿದವು.
JIMEX 20 ಉಭಯ ನೌಕಾಪಡೆಗಳ ನಡುವಿನ ಸಹಕಾರ ಮತ್ತು ಪರಸ್ಪರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಉಭಯ ದೇಶಗಳ ನಡುವಿನ ದೀರ್ಘಕಾಲದ ಸ್ನೇಹ ಸಂಬಂಧವನ್ನು ಬಲಪಡಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.