ಭೋಪಾಲ್: ಮಧ್ಯಪ್ರದೇಶದ ಛತ್ರಪುರ ಜಿಲ್ಲೆಯ ಅಂಗರೋಥ ಗ್ರಾಮದ 250 ಮಹಿಳೆಯರು ನೀರಿಗೆ ದಾರಿ ಮಾಡಿಕೊಡಲು ಪರ್ವತವನ್ನೇ ಸಮತಟ್ಟು ಮಾಡಿದ್ದಾರೆ. ಈ ಹಳ್ಳಿಯು ದೀರ್ಘಕಾಲದದಿಂದ ನೀರಿನ ಕೊರತೆಯನ್ನು ಎದುರಿಸುತ್ತಿತ್ತು, ಈ ಕೊರತೆಯನ್ನು ನೀಗಿಸಲು ಮುಂದಾದ ಮಹಿಳೆಯರು ಪರ್ವತವನ್ನೇ ಅಗೆದು ನೀರು ತಮ್ಮ ಗ್ರಾಮಕ್ಕೆ ಹರಿದು ಬರುವಂತೆ ಮಾಡಿದ್ದಾರೆ.
ಈ ಮಹಿಳೆಯರು ತೋರಿಸಿರುವ ಸಾಹಸ ಬಿಹಾರದ ದಶರಥ ಮಾಂಝಿ ಅವರಿಗಿಂತ ಕಡಿಮೆಯಿಲ್ಲ, ಮಾಂಝಿ ಅವರು ಗಯಾ ಬಳಿಯ ಗೆಹ್ಲೌರ್ ಗ್ರಾಮದಲ್ಲಿ ಸುತ್ತಿಗೆ ಮತ್ತು ಉಳಿ ಸಹಾಯದಿಂದ ಇಡೀ ಪರ್ವತವನ್ನೇ ಅಗೆದು ರಸ್ತೆಯನ್ನು ನಿರ್ಮಾಣ ಮಾಡಿದ್ದರು.
ತಮ್ಮ ಸಾಹಸಗಾಥೆಯ ಬಗ್ಗೆ ಮಾತನಾಡಿರುವ ವನವಾಸಿ ಮಹಿಳೆ ಬಬಿತಾ, “ನಾವು ಕಾಡಿನಲ್ಲಿ ಮುಕ್ತವಾಗಿ ಹರಿಯುವ ನೀರು ನಮ್ಮ ಗ್ರಾಮಕ್ಕೆ ಹರಿದು ಬರುವಂತೆ ದಾರಿ ಮಾಡಿಕೊಡಲು 18 ತಿಂಗಳುಗಳಿಂದ ನಿರಂತರವಾಗಿ ಕೆಲಸ ಮಾಡಿದೆವು. ಕಾಡಿನ ನೀರು ನಮ್ಮ ಗ್ರಾಮವನ್ನು ತಲುಪುತ್ತಿರಲಿಲ್ಲ ಹೀಗಾಗಿ ನಾವು ಮಹಿಳೆಯರು ಸೇರಿ ಪರ್ವತವನ್ನು ಸಮತಟ್ಟು ಮಾಡುವ ನಿರ್ಧಾರ ಮಾಡಿ ಮುನ್ನುಗ್ಗಿದೆವು” ಎಂದಿದ್ದಾರೆ.
“ನಾವು ಇದನ್ನು ನಮಗಾಗಿ ಮಾಡುತ್ತಿದ್ದೇವೆ. ಏಕೆಂದರೆ ಇಲ್ಲಿ ನೀರಿನ ಕೊರತೆ ಇದೆ, ನಮಗೆ ಕೃಷಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಹಳ್ಳಿಯ ಸುಮಾರು 250 ಮಹಿಳೆಯರು ಗ್ರಾಮದ ಕೊಳಕ್ಕೆ ನೀರು ತರಲು ಒಂದು ಮಾರ್ಗವನ್ನು ಮಾಡಿದ್ದಾರೆ. ಈ ಕೆಲಸವನ್ನು ಪೂರ್ಣಗೊಳಿಸಲು ನಮಗೆ ಸುಮಾರು 18 ತಿಂಗಳುಗಳು ಬೇಕಾಯಿತು “ಮತ್ತೊಂದು ಗ್ರಾಮದ ಮಹಿಳೆ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.