ಹೈದರಾಬಾದ್: ಕೊರೋನಾ ಸೋಂಕಿತರ ದೇಹದಿಂದ ಹೊರಬಂದ ವೈರಾಣುಗಳು ಗಾಳಿಯಲ್ಲಿ ಎಷ್ಟು ಗಂಟೆಗಳವರೆಗೆ ಜೀವಿಸುತ್ತದೆ, ಎಷ್ಟು ದೂರದ ವರೆಗೆ ಚಲಿಸುವ ಶಕ್ತಿ ಇದೆ ಎಂಬುದರ ಕುರಿತಾದಂತೆ ಹೈದರಾಬಾದ್ನ ಸಿಎಸ್ಐಆರ್- ಸೆಂಟರ್ ಫಾರ್ ಸೆಲ್ಯುಲಾರ್ ಆಂಡ್ ಮಾಲಿಕ್ಯುಲರ್ ಬಯಾಲಜಿ (ಸಿಸಿಎಂಬಿ) ಸಂಸ್ಥೆ ಅಧ್ಯಯನ ಪ್ರಾರಂಭಿಸಿದೆ.
ಸುಮಾರು ಎರಡು ತಿಂಗಳ ಹಿಂದೆ ಪ್ರಪಂಚದ ವಿವಿಧ ದೇಶಗಳ 200 ಕ್ಕೂ ಅಧಿಕ ವಿಜ್ಞಾನಿಗಳು ಗಾಳಿಯಲ್ಲಿ ಕೊರೋನಾ ಸೋಂಕು ಹರಡುತ್ತದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರ ಬರೆದಿದ್ದರು. ಈ ರೀತಿಯ ಅಧ್ಯಯನ ನಡೆದ ಪಕ್ಷದಲ್ಲಿ ಸದಾ ಕಾಲ ಕೊರೋನಾ ಸೋಂಕಿತರ ನಡುವೆಯೇ ಕಾರ್ಯ ನಿರ್ವಹಿಸುವ ವೈದ್ಯಕೀಯ ಸೇವಾ ಸಿಬ್ಬಂದಿಯ ಸುರಕ್ಷತೆಗೆ ಮತ್ತಷ್ಟು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿಯೂ ಮಹತ್ವ ಪಡೆಯಲಿದೆ ಎಂದು ಸಿಸಿಎಂಬಿ ನಿರ್ದೇಶಕ ರಾಕೇಶ್ ಮಿಶ್ರಾ ಅವರು ಮಾಹಿತಿ ನೀಡಿದ್ದಾರೆ.
ಈ ಅಧ್ಯಯನದ ಫಲಿತಾಂಶ ದೊರೆತಲ್ಲಿ ಜನ ನಿಬಿಡ ಪ್ರದೇಶಗಳಲ್ಲಿ ಕೈಗೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಬಗೆಗೂ ಚಿಂತನೆ ನಡೆಸಬಹುದಾಗಿದೆ. ಈ ಸಂಬಂಧ ಮಾಲ್ಗಳು ಅಥವಾ ಇನ್ನಿತರ ಯಾವುದೇ ರೀತಿಯ ಜನ ಸಂದಣಿಯ ಪ್ರದೇಶಗಳಲ್ಲಿ ಸೇರುವ ಜನರಿಂದ ಕೊರೋನಾ ಮಾದರಿ ಪರೀಕ್ಷೆ ಮಾಡಲಾಗುತ್ತದೆ ಎಂದೂ ಸಂಶೋಧನೆಗೆ ತೊಡಗಿರುವ ತಂಡ ಮಾಹಿತಿ ನೀಡಿದೆ. ಜೊತೆಗೆ ಕೊರೋನಾ ಸೋಂಕಿತರಿರುವ ಆಸ್ಪತ್ರೆಗಳ ತೀವ್ರ ನಿಗಾ ಘಟಕ, ಕೊರೋನಾ ವಾರ್ಡ್ಗಳ ಸಮೀಪದಲ್ಲಿರುವ ಜನರ ಮಾದರಿಗಳನ್ನು ಈ ಅಧ್ಯಯನಕ್ಕೆ ಬಳಸಲಾಗುತ್ತದೆ ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.