ಪುದುಚೇರಿ: ತಮಿಳುನಾಡು ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಪುದುಚೇರಿಯಲ್ಲಿ ಪ್ರಾಚೀನ ಕಾಲದ 74 ವಿಗ್ರಹಗಳನ್ನು ವಶಕ್ಕೆ ಪಡೆದುಕೊಂಡಿದೆ.
ಆರೋಪಿ ಪುದುಚೇರಿಯ ಉದ್ಯಮಿ ಜಿನ ಪಾಲ್ ರಾಜರಥಿನಂ ಎಂಬವರ ಮನೆಯಲ್ಲಿದ್ದ ಪುರಾತನ ವಿಗ್ರಹಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಲವು ಕೋಟಿಗೆ ಬೆಲೆಬಾಳುವ ಈ ವಿಗ್ರಹಗಳಲ್ಲಿ ಕೆಲವು ವಿಗ್ರಹಗಳು ಚೋಳರ ಕಾಲಕ್ಕೆ ಸೇರಿದವುಗಳಾಗಿರುವುದಾಗಿ ಮೂಲಗಳು ತಿಳಿಸಿವೆ.
ವಶಕ್ಕೆ ತೆಗೆದುಕೊಳ್ಳಲಾದ ವಿಗ್ರಹಗಳಲ್ಲಿ ಕಂಚಿನ 60 ವಿಗ್ರಹಗಳು ಮತ್ತು 14 ಕಲ್ಲಿನ ಪ್ರತಿಮೆಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇವುಗಳಲ್ಲಿ ಹಲವು ವಿಗ್ರಹಗಳು ಪಂಚಲೋಹದ ವಿಗ್ರಹಗಳಾಗಿರಬಹುದು ಎಂಬ ಸಂದೇಹವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ವಿವಿಧ ಭಾಗಗಳಿಂದ ಈ ವಿಗ್ರಹಗಳ ಕಳ್ಳತನ ನಡೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಆರೋಪಿಗಳು ಈ ವಿಗ್ರಹಗಳು ತಮ್ಮ ಹಿರಿಯರ ಕಾಲದಿಂದಲೂ ತಮ್ಮ ಮನೆಯಲ್ಲಿ ಇರುವುದಾಗಿ ಹೇಳಿಕೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಯಾರನ್ನೂ ಬಂಧನಕ್ಕೆ ಒಳಪಡಿಸಲಾಗಿಲ್ಲ. ಸದ್ಯ ಆರೋಪಿ ಸ್ಥಾನದಲ್ಲಿರುವ ರಾಜರಥಿನಂ ಅವರು ಭಾರತೀಯ ಮೂಲದ ಫ್ರೆಂಚ್ ರಾಷ್ಟ್ರೀಯತೆ ಹೊಂದಿರುವ ಮೇರಿ ಥೆರೆಸ್ ಅನಂತಿ ವನಿನಾ ಎಂಬವರ ಸಹೋದರ. 2016 ರಲ್ಲಿ ವನಿನಾ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಹಲವು ಕೋಟೀಗಳ 11 ಕಂಚಿನ ಪ್ರತಿಮೆಗಳನ್ನು ವಶಕ್ಕೆ ಪಡೆದಿದ್ದರು. 2019 ರಲ್ಲಿ ಆಕೆಯನ್ನು ಫ್ರಾನ್ಸ್ಗೆ ಅಕ್ರಮವಾಗಿ ವಿಗ್ರಹಗಳನ್ನು ರಫ್ತು ಮಾಡುತ್ತಿದ್ದ ಆರೋಪದ ಮೇಲೆ ಚೆನ್ನೈನಲ್ಲಿ ಬಂಧಿಸಲಾಗಿತ್ತು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.