ನವದೆಹಲಿ: ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯಗಳನ್ನು ಯನೆಸ್ಕೋದ ವಿಶ್ವ ಪಾರಂಪರಿಕ ಸ್ಥಾನಮಾನದ (World Heritage Site) ಪಟ್ಟಿಗೆ ನಾಮ ನಿರ್ದೇಶನ ಮಾಡಲಾಗುತ್ತದೆ. ನಾಮ ನಿರ್ದೇಶನ ಸಲ್ಲಿಕೆಗೆ ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ ಎಂದು ರಾಜ್ಯ ಪುರಾತತ್ವ ಇಲಾಖೆಯ ಮೂಲಗಳು ತಿಳಿಸಿವೆ.
ಕಳೆದ ಆರು ವರ್ಷಗಳಿಂದಲೂ ಬೇಲೂರು ಮತ್ತು ಹಳೇಬೀಡು ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದೀಗ ಹೊಯ್ಸಳರ ಕಾಲದ 12 ನೇ ಶತಮಾನದ ಸೋಮನಾಥಪುರದ ಕೇಶವ ದೇಗುಲವನ್ನು ಯುನೆಸ್ಕೋ ವರ್ಲ್ಡ್ ಹೆರಿಟೇಜ್ ಸೈಟ್ ಗೆ ಸೇರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ರಾಜ್ಯದ ಪುರಾತತ್ವ ಇಲಾಖೆಯು ಈ ಸಂಬಂಧ ಬೆಂಗಳೂರಿನ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ಸ್ ಆಂಡ್ ಕಲ್ಚರಲ್ ಹೆರಿಟೇಜ್ ಜೊತೆಗೂ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಸೋಮನಾಥಪುರ ಅಭಿವೃದ್ಧಿ ಕಾಮಗಾರಿಗಳನ್ನು ಕಳೆದ ಸೆಪ್ಟೆಂಬರ್ ತಿಂಗಳಲ್ಲಿಯೇ ಆರಂಭ ಮಾಡಲಾಗಿದೆ.
ಈ ಸಂಬಂಧ ಬಿ.ಆರ್. ಯುನೆಸ್ಕೋ ವಿಶ್ವ ಪರಂಪರೆಯ ಸಭೆಗಳಲ್ಲಿ ದೇಶವನ್ನು ಪ್ರತಿನಿಧಿಸುವ ಎಎಸ್ಐಗೆ ಅಂತಿಮ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಪುರಾತತ್ವ ಇಲಾಖೆ ತಿಳಿಸಿದೆ. ಈ ಸಂಬಂಧ ಸ್ಥಳೀಯ ಸಮುದಾಯಗಳ ಮುಖ್ಯಸ್ಥರ ಜೊತೆಗೆ ಸಭೆಯನ್ನೂ ನಡೆಸಲಾಗಿದೆ ಎಂದೂ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿವೆ.
ಈ ಸಂಬಂಧ ಮಾಹಿತಿ ನೀಡಿರುವ ಈ ಪಟ್ಟಿ ಸಿದ್ಧಪಡಿಸುವ ತಜ್ಞರ ತಂಡದ ಮುಖ್ಯಸ್ಥ ಪಂಕಜ್ ಮೋದಿ, ಈ ಪಟ್ಟಿ ಸಿದ್ಧಪಡಿಸಲು ಕರ್ನಾಟಕದ 14 ಹೊಯ್ಸಳ ದೇವಾಲಯಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಬೇಲೂರು, ಹಳೇಬೀಡುಗಳ ಹೆಸರಿದ್ದು, ಸದ್ಯ ಈ ಪಟ್ಟಿಯಲ್ಲಿ ಸೋಮನಾಥಪುರ ದೇವಾಲಯವನ್ನೂ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಪ್ರಕ್ರಿಯೆ 18 ತಿಂಗಳುಗಳದ್ದಾಗಿದ್ದು ಪಟ್ಟಿ ಸಲ್ಲಿಸಿದ ಬಳಿಕ ಯುನೆಸ್ಕೋದಿಂದ ಪ್ರತಿಕ್ರಿಯೆ ಬರುತ್ತದೆ. ನಂತರ ಪಟ್ಟಿಯಲ್ಲಿ ನಾಮನಿರ್ದೇಶನ ಗೊಂಡ ಪ್ರದೇಶಗಳಿಗೆ ಭೇಟಿ ನೀಡುತ್ತವೆ. ಬಳಿಕ ಉಳಿದ ಪ್ರಕ್ರಿಯೆಗಳು ನಡೆಯುತ್ತದೆ. ಕೊರೋನಾ ಸಾಂಕ್ರಾಮಿಕ ಬಿಕ್ಕಟ್ಟಿನ ಕಾರಣದಿಂದ ಈ ಎಲ್ಲಾ ಕೆಲಸಗಳು ವಿಳಂಬವಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಹೊಯ್ಸಳರ ಕಾಲದ 137 ಸ್ಮಾರಕಗಳಿದ್ದು ಅವುಗಳಲ್ಲಿ 43 ಸ್ಮಾರಕಗಳನ್ನು ಎಎಸ್ಐ ಮತ್ತು 55 ಸ್ಮಾರಕಗಳನ್ನು ರಾಜ್ಯದ ಪುರಾತತ್ವ ಇಲಾಖೆ ರಕ್ಷಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.