ನವದೆಹಲಿ: ಆದಾಯ ತೆರಿಗೆ ಇಲಾಖೆ ಇಂದು ಮುಖರಹಿತ (ಫೇಸ್ಲೆಸ್) ಆದಾಯ ತೆರಿಗೆ ಮೇಲ್ಮನವಿ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಹೆಚ್ಚಿನ ಐ-ಟಿ ಮೇಲ್ಮನವಿಗಳನ್ನು ಮುಖರಹಿತವಾಗಿ ಇತ್ಯರ್ಥಪಡಿಸಲಾಗಿದೆ. ಐ-ಟಿ ಇಲಾಖೆಯ ಹೊಸ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿ, ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿರಲಿದೆ.
ಸಿಬಿಡಿಟಿ ಮಾಹಿತಿಯ ಪ್ರಕಾರ, ಪ್ರಸ್ತುತ ಐ-ಟಿ ಇಲಾಖೆಯಲ್ಲಿ ಆಯುಕ್ತರ (ಮೇಲ್ಮನವಿ) ಮಟ್ಟದಲ್ಲಿ 4.6 ಲಕ್ಷಕ್ಕೂ ಹೆಚ್ಚು ಮೇಲ್ಮನವಿಗಳು ಬಾಕಿ ಉಳಿದಿವೆ. ಇದರಲ್ಲಿ, 4.05 ಲಕ್ಷ ಮೇಲ್ಮನವಿಗಳು, ಅಂದರೆ ಸುಮಾರು 88%, ಈಗ ಫೇಸ್ಲೆಸ್ ಅಪೀಲ್ ಕಾರ್ಯವಿಧಾನದ ಅಡಿಯಲ್ಲಿ ನಿರ್ವಹಿಸಲ್ಪಡಲಿವೆ.
ಗಂಭೀರ ವಂಚನೆಗಳು, ಪ್ರಮುಖ ತೆರಿಗೆ ವಂಚನೆ, ಸೂಕ್ಷ್ಮ ಮತ್ತು ಶೋಧ ವಿಷಯಗಳು, ಅಂತರರಾಷ್ಟ್ರೀಯ ತೆರಿಗೆ ಮತ್ತು ಕಪ್ಪು ಹಣ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳು ಈ ವ್ಯವಸ್ಥೆಯ ಭಾಗವಾಗುವುದಿಲ್ಲ.
ಭಾರತದಲ್ಲಿ ‘ಪಾರದರ್ಶಕ ತೆರಿಗೆಯನ್ನು’ ಉತ್ತೇಜಿಸುವ ಸರ್ಕಾರದ ಪ್ರಯತ್ನಗಳ ಅಡಿಯಲ್ಲಿ ಮುಖರಹಿತ ಮೌಲ್ಯಮಾಪನ ಮತ್ತು ತೆರಿಗೆದಾರರ ಚಾರ್ಟರ್ಗೆ ಚಾಲನೆ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 13 ರಂದು ಈ ಯೋಜನೆ ಪ್ರಾರಂಭಿಸಿದ್ದರು.
ಅಲ್ಲದೆ, ಇತ್ತೀಚಿನ ವರ್ಷಗಳಲ್ಲಿ, ತೆರಿಗೆ ಪ್ರಕ್ರಿಯೆಗಳ ಸರಳೀಕರಣಕ್ಕಾಗಿ ಮತ್ತು ತೆರಿಗೆದಾರರಿಗೆ ಸುಲಭವಾಗಿ ಅನುಸರಣೆಗಾಗಿ ಐ-ಟಿ ಇಲಾಖೆ ನೇರ ತೆರಿಗೆಗಳಲ್ಲಿ ಹಲವಾರು ಸುಧಾರಣೆಗಳನ್ನು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.