ನವದೆಹಲಿ: ದೇಶದಲ್ಲಿ ಹೈಡ್ರೋಜನ್ ಇಂಧನ ಆಧಾರಿತ ವಾಹನಗಳ ಸುರಕ್ಷತಾ ಮೌಲ್ಯಮಾಪನಕ್ಕಾಗಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ದೇಶದಲ್ಲಿ ಹೈಡ್ರೋಜನ್ ಇಂಧನದ ಸಹಾಯದಿಂದ ಕಾರ್ಯ ನಿರ್ವಹಿಸುವ ವಾಹನಗಳಿಗೆ ಉತ್ತೇಜನ ನೀಡುವ ಸಲುವಾಗಿ ರಾಷ್ಟ್ರೀಯ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಆದೇಶವನ್ನು ಹೊರಡಿಸಿದೆ.
ಸೆ. 23, 2020 ರ ಕೇಂದ್ರೀಯ ಮೋಟಾರು ವಾಹನಗಳ ಕಾಯ್ದೆ 1989 ರ ತಿದ್ದುಪಡಿಗೆ ಅನುಗುಣವಾಗಿ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಇದರಲ್ಲಿ ಹೈಡ್ರೋಜನ್ ಇಂಧನ ಬಳಸಿ ಕಾರ್ಯ ನಿರ್ವಹಣೆ ಮಾಡುವ ವಾಹನಗಳ ಮೌಲ್ಯಮಾಪನದ ಮಾನದಂಡಗಳನ್ನು ತಿಳಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಈ ಆದೇಶವು ದೇಶದಲ್ಲಿ ಹೈಡ್ರೋಜನ್ ಇಂಧನ ಬಳಕೆ ಮಾಡುವ ವಾಹನಗಳ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರೂಪಿಸಲಾಗಿದೆ. ಇಂತಹ ವಾಹನಗಳ ಬಳಕೆಯಿಂದ ಪರಿಸರಕ್ಕೆ ಉಂಟಾಗುವ ಹಾನಿಯ ಪ್ರಮಾಣವೂ ಕಡಿಮೆ. ಈಗಾಗಲೇ ನೀಡಲಾದ ಮಾನದಂಡಗಳನ್ನು ತಯಾರಕರು ಮತ್ತು ಪೂರೈಕೆದಾರರು ಅನುಸರಿಸುತ್ತಿದ್ದಾರೆ. ಈ ಮಾನದಂಡಗಳು ಅಂತರರಾಷ್ಟ್ರೀಯ ಮಾನದಂಡಗಳಿಗೆ ಸರಿಸಮನಾದುದಾಗಿದೆ ಎಂದೂ ಸಚಿವಾಲಯ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.