ನವದೆಹಲಿ: ಆರೋಗ್ಯ ಸಚಿವಾಲಯದ ಟೆಲಿ-ಕಾನ್ಸುಲೇಷನ್ ಪ್ಲಾಟ್ಫಾರ್ಮ್ ಇ ಸಂಜೀವನಿ ಪ್ರಾರಂಭವಾದ ಆರು ತಿಂಗಳ ಅವಧಿಯಲ್ಲೇ 3 ಲಕ್ಷ ಹೊರ ರೋಗಿಗಳ ವಿಭಾಗ (ಒಪಿಡಿ)ದ ಸಮಾಲೋಚನೆಗಳನ್ನು ನಡೆಸಿದೆ.
ಕೊರೋನಾವೈರಸ್ ದೇಶದಲ್ಲಿ ಕಾಣಿಸಿಕೊಂಡ ಸಂದರ್ಭದಲ್ಲಿ ದೇಶವ್ಯಾಪಿಯಾಗಿ ಲಾಕ್ಡೌನ್ ಅನ್ನು ವಿಧಿಸಲಾಗಿತ್ತು, ಈ ವೇಳೆ ಆರೋಗ್ಯ ಸೇವೆಗಳು ಭಾಗಶಃ ನಡೆಯುತ್ತಿದ್ದವು. ಹೀಗಾಗಿ ಆರೋಗ್ಯ ಸೇವೆಗಳನ್ನು ನಿರ್ವಹಿಸಲು ರೋಗಿ- ವೈದ್ಯರ ನಡುವೆ ಟೆಲಿಮೆಡಿಸಿನ್ ಸೇವೆ ಇಸಂಜೀವಿನಿ ಒಪಿಡಿಯನ್ನು ಈ ವರ್ಷದ ಏಪ್ರಿಲ್ನಲ್ಲಿ ಸಚಿವಾಲಯ ಪ್ರಾರಂಭಿಸಿತು.
“ಈ ಸೇವೆಯು ವೈದ್ಯರು ಮತ್ತು ರೋಗಿಗಳ ನಡುವೆ ಭೌತಿಕ ಅಂತರವನ್ನು ಖಾತರಿಪಡಿಸುವ ಮೂಲಕ ಕೋವಿಡ್ ಹರಡುವಿಕೆಯನ್ನು ತಡೆಗಟ್ಟಲು ಸಹಾಯ ಮಾಡಿದೆ ಮತ್ತು ಕೋವಿಡ್ ಅಲ್ಲದ ಅಗತ್ಯ ಆರೋಗ್ಯ ಸೇವೆಗಾಗಿ ಏಕಕಾಲದಲ್ಲಿ ನಿಬಂಧನೆಗಳನ್ನು ಶಕ್ತಗೊಳಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಟೆಲಿಮೆಡಿಸಿನ್ ಸೇವೆ ಪಡೆದುಕೊಂಡಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ” ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇ ಸಂಜೀವನಿ ಬಳಸುವ ಒಟ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 26 ಕ್ಕೆ ಏರಿದೆ. ವೇದಿಕೆಯನ್ನು ಸಮರ್ಥವಾಗಿ ಬಳಸಲು ಸುಮಾರು 4,600 ವೈದ್ಯರಿಗೆ ತರಬೇತಿ ನೀಡಲಾಗಿದೆ ಮತ್ತು ದಿನಕ್ಕೆ ಕನಿಷ್ಠ 6,000 ಸಮಾಲೋಚನೆಗಳನ್ನು ದಾಖಲಿಸಲಾಗಿದೆ.
1,29,801 ಡಿಜಿಟಲ್ ಸಂವಹನಗಳೊಂದಿಗೆ, ತಮಿಳುನಾಡು ಇದುವರೆಗೆ ಅತಿ ಹೆಚ್ಚು ದೂರವಾಣಿ ಸಮಾಲೋಚನೆಗಳನ್ನು ನಡೆಸಿದೆ ಎಂದು ಪ್ರಕಟಣೆ ತಿಳಿಸಿದೆ. ನಂತರದ ಸ್ಥಾನದಲ್ಲಿ ಕೇರಳ 32,921 ಸಮಾಲೋಚನೆಗನ್ನು ಮತ್ತು ಉತ್ತರಾಖಂಡ 10,391 ಸಮಾಲೋಚನೆಗಳನ್ನು ನಡೆಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.