ಚಂಡೀಗಢ: ಐಟಿಬಿಪಿ (ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್) ಪಡೆಯಲ್ಲಿ ಕಾರ್ಯನಿರ್ವಹಿಸುವ ಶ್ವಾನಗಳಿಗೂ ಇನ್ನು ಮುಂದೆ ನಿವೃತ್ತಿಯ ಬಳಿಕ ಆಶ್ರಯ ಸ್ಥಳಗಳನ್ನು ಒದಗಿಸಲಾಗುತ್ತದೆ.
ಈಗಾಗಲೇ ಚಂಡೀಗಢದ ಪಂಚಕುಲ ಸಮೀಪದ ಭಾನುವಿನಲ್ಲಿ ‘ಕೆ9 ರಿಟೈರ್ಮೆಂಟ್ ಹೋಂ’ ಅನ್ನು ಐಟಿಬಿಪಿ ಶಾಲೆಗಳಿಗಾಗಿ ನಿರ್ಮಾಣ ಮಾಡಲಾಗಿದೆ. ಎರಡು ತಿಂಗಳ ಒಳಗೆ ಇದು ಕಾರ್ಯಾಚರಿಸುವ ನಿರೀಕ್ಷೆಯಿದೆ.
ಕಳೆದ ಎಂಟು ಹತ್ತು ವರ್ಷಗಳಿಂದ ಐಟಿಬಿಪಿ ಪಡೆಯಲ್ಲಿ ಕಣ್ಗಾವಲು, ಬಂಡುಕೋರ ವಿರೋಧಿ ಕಾರ್ಯಾಚರಣೆ, ನಕ್ಸಲ್ ವಿರೋಧಿ ಕಾರ್ಯಾಚರಣೆ ಮುಂತಾದುವುಗಳಲ್ಲಿ ಭಾಗವಹಿಸಿ ನಿವೃತ್ತವಾಗಿರುವ 30 ಶ್ವಾನಗಳು ಇಲ್ಲಿ ಆಶ್ರಯವನ್ನು ಪಡೆದುಕೊಳ್ಳಲಿವೆ. ಇವುಗಳಲ್ಲಿ ಹಲವು ಶ್ವಾನಗಳು ಐಟಿಬಿಪಿ ಪಡೆಗಳೊಂದಿಗೆ ಆಫ್ಘಾನಿಸ್ಥಾನದಲ್ಲೂ ನಿಯೋಜನೆಗೊಂಡು ಸೇವೆ ಸಲ್ಲಿಸಿವೆ.
ಈ ಶ್ವಾನಗಳ ವಯಸ್ಸು ಹತ್ತರಿಂದ ಹನ್ನೆರಡು ವರ್ಷ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಶ್ವಾನಗಳನ್ನು ಎಂಟು ವರ್ಷಗಳ ಕಾಲ ಸೇವೆಯಲ್ಲಿ ಇರಿಸಲಾಗುತ್ತದೆ. ಉತ್ತಮ ಆಹಾರ, ತರಬೇತಿ ಹೊಂದಿದ ಕೆಲವು ಶ್ವಾನಗಳು 8 ವರ್ಷಕ್ಕಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಬಲ್ಲವು.
ನಿವೃತ್ತ ಶ್ವಾನಗಳಿಗೆ ನಿವೃತ್ತ ಆಶ್ರಯಗಳನ್ನು ಸ್ಥಾಪನೆ ಮಾಡಲು ಕೇಂದ್ರ ಗೃಹಸಚಿವಾಲಯವು ಈಗಾಗಲೇ ಅನುಮೋದನೆ ನೀಡಿದೆ.
ನಿವೃತ್ತ ಶ್ವಾನಗಳನ್ನು ಪಶುವೈದ್ಯರುಗಳ ತರಬೇತಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಐಟಿಬಿಪಿಯ 36 ಶ್ವಾನಗಳು ನಿವೃತ್ತವಾಗಲಿದ್ದು, 22 ಲ್ಯಾಬ್ರಡಾರ್, 7 ಬೆಲ್ಜಿಯಂ ಶಫರ್ಡ್ ಮತ್ತೆ ಏಳು ಜರ್ಮನ್ ಶಫರ್ಡ್ ಸೇರಿವೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.