ನವದೆಹಲಿ: ರಫೇಲ್ ಯುದ್ಧ ವಿಮಾನದ ಅಂಬಾಲ ‘ಗೋಲ್ಡನ್ ಆ್ಯರೋ’ ಸ್ಕ್ವಾಡ್ರನ್ನಲ್ಲಿ ಮೊದಲ ಮಹಿಳಾ ಪೈಲೆಟ್ ಆಗಿ ಇತಿಹಾಸ ನಿರ್ಮಿಸಲಿದ್ದಾರೆ ಫ್ಲೈಟ್ ಲೆಫ್ಟಿನೆಂಟ್ ಶಿವಾಂಗಿ ಸಿಂಗ್. ಈಕೆ ಉತ್ತರ ಪ್ರದೇಶದ ವಾರಣಾಸಿ ಮೂಲದವರು.
2017ರಲ್ಲಿ ಮಹಿಳಾ ಪೈಲೆಟ್ಗಳ ಎರಡನೇ ಬ್ಯಾಚ್ನ ಭಾಗವಾಗಿ ಭಾರತೀಯ ವಾಯುಸೇನೆ ಸೇರಿದ ಶಿವಾಂಗಿ ಸಿಂಗ್ ಅವರು , ಪ್ರಸ್ತುತ ತರಬೇತಿಯನ್ನು ಪಡೆಯುತ್ತಿದ್ದಾರೆ. ಪ್ರಸ್ತುತ ಅವರು ರಾಜಸ್ಥಾನದ ವಾಯುನೆಲೆಯಲ್ಲಿ ನಿಯೋಜಿತರಾಗಿದ್ದಾರೆ.
ವಾರಣಾಸಿಯಲ್ಲಿ ಶಾಲಾ ಶಿಕ್ಷಣವನ್ನು ಪಡೆದ ಶಿವಾಂಗಿ ಅವರು, ಬಳಿಕ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಂಡರು. ಅಲ್ಲಿ ಅವರು ನ್ಯಾಷನಲ್ ಕೆಡೆಟ್ ಕಾರ್ಪ್ಸ್ನ ಯುಪಿ ಏರ್ ಸ್ಕ್ವಾಡ್ರನ್ನ ಭಾಗವಾಗಿದ್ದರು. 2013ರಲ್ಲಿ ಅವರು ಗಣರಾಜ್ಯೋತ್ಸವ ಸಮಾರಂಭದಲ್ಲಿ ಉತ್ತರಪ್ರದೇಶವನ್ನು ದೆಹಲಿಯಲ್ಲಿ ಪ್ರತಿನಿಧಿಸಿದ್ದರು. 2016ರಲ್ಲಿ ಅವರು ತರಬೇತಿಗಾಗಿ ಏರ್ಫೋರ್ಸ್ ಅಕಾಡೆಮಿಯನ್ನು ಸೇರಿಕೊಂಡರು.
ಶಿವಾಂಗಿಯವರ ಸಾಧನೆಗೆ ಅವರ ತಾಯಿ ಸಂತೋಷವನ್ನು ವ್ಯಕ್ತಪಡಿಸಿದ್ದು, ತನ್ನ ಮಗಳು ಯುದ್ಧ ವಿಮಾನದ ಪೈಲೆಟ್ ಆಗಲು ಸದಾ ಬಯಸುತ್ತಿದ್ದಳು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.