ನವದೆಹಲಿ: ಕೃಷಿ ಮಸೂದೆಗಳ ಅಂಗೀಕಾರದ ಸಂದರ್ಭದಲ್ಲಿ ವಿರೋಧ ಪಕ್ಷಗಳ ಸಂಸತ್ ಸದಸ್ಯರು ಭಾನುವಾರ ಅಶಿಸ್ತಿನ ವರ್ತನೆಯನ್ನು ತೋರಿಸಿದ್ದರು. ರಾಜ್ಯಸಭಾ ಉಪ ಸಭಾಧ್ಯಕ್ಷರ ವಿರುದ್ಧ ಅನಾಗರಿಕ ರೀತಿಯ ಪ್ರತಿಭಟನೆಯನ್ನು ನಡೆಸಿದ್ದರು. ಇದನ್ನು ವಿರೋಧಿಸಲು ಉಪ ಸಭಾಧ್ಯಕ್ಷ ಹರಿವಂಶ್ ಅವರು 24 ಗಂಟೆಗಳ ಉಪವಾಸವನ್ನು ಆಚರಿಸುವುದಾಗಿ ಮಂಗಳವಾರ ಹೇಳಿದ್ದಾರೆ.
ಮೇಲ್ಮನೆಯ ಅಧ್ಯಕ್ಷರೂ ಆಗಿರುವ ಉಪಾಧ್ಯಕ್ಷ ವೆಂಕಯ್ಯ ನಾಯ್ಡು ಅವರಿಗೆ ಬರೆದ ಪತ್ರದಲ್ಲಿ, “ಸದನದಲ್ಲಿ ಭಾನುವಾರ ನಡೆದ ಅನಾಗರಿಕ ವರ್ತನೆಯಿಂದಾಗಿ ನನಗೆ ಎರಡು ರಾತ್ರಿ ಮಲಗಲು ಸಾಧ್ಯವಾಗಲಿಲ್ಲ. ಪ್ರಜಾಪ್ರಭುತ್ವದ ಹೆಸರಿನಲ್ಲಿ, ಸದನದ ಗೌರವಾನ್ವಿತ ಸದಸ್ಯರು ದೈಹಿಕ ಹಿಂಸಾಚಾರದಲ್ಲಿ ತೊಡಗಿದ್ದರು” ಎಂದು ಹರಿವಂಶ್ ಆಪಾದಿಸಿದ್ದಾರೆ.
ಆ ದಿನದಂದು ಸಂಭವಿಸಿದ ಘಟನೆಗಳನ್ನು ವಿವರಿಸುತ್ತಾ ತನ್ನ ವಿನಮ್ರ ಹಿನ್ನೆಲೆಯ ಬಗ್ಗೆ ಮಾತನಾಡಿದ ಹರಿವಂಶ್ ಅವರು, ಭಗವಾನ್ ಬುದ್ಧನಿಂದ ಪ್ರೇರಿತನಾಗಿದ್ದೇನೆ ಮತ್ತು ಒಂದು ದಿನ ಉಪವಾಸವನ್ನು ಆಚರಿಸುತ್ತೇನೆ, ಇದು ದುರ್ವತನೆ ತೋರಿದವರಲ್ಲಿ’ ಸ್ವಯಂ ಶುದ್ಧೀಕರಣ’ಕ್ಕೆ ಪ್ರೇರಣೆ ನೀಡುತ್ತದೆ ಎಂದಿದ್ದಾರೆ.
ಸೆಪ್ಟೆಂಬರ್ 22 ರಿಂದ ಸೆಪ್ಟೆಂಬರ್ 23 ರವರೆಗೆ 24 ಗಂಟೆಗಳ ಉಪವಾಸವನ್ನು ಆಚರಿಸುವುದಾಗಿ ಹೇಳಿದರು.
ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ಅಮಾನತುಗೊಂಡ ಸಂಸದರನ್ನು ಹರಿವಂಶ್ ಭೇಟಿಯಾಗಿ ಅವರಿಗೆ ಚಹಾ ಅರ್ಪಿಸಿದ್ದರು. ಇದನ್ನು ಸಂಸದರು ನಿರಾಕರಿಸಿದ್ದರು. ಹರಿವಂಶ್ ಅವರ ನಡೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
Rajya Sabha Deputy Chairman Harivansh to observe one-day fast against the unruly behaviour with him in the House by Opposition MPs during the passing of agriculture Bills on 20th September pic.twitter.com/cphCDVHrqM
— ANI (@ANI) September 22, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.