ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು ಮಂಗಳವಾರ ಬೆಳಿಗ್ಗೆ ಅಪರಿಚಿತ ಭಯೋತ್ಪಾದಕನನ್ನು ಗುಂಡಿಕ್ಕಿ ಕೊಂದಿವೆ.
ಈಗಲೂ ನಡೆಯುತ್ತಿರುವ ಈ ಎನ್ಕೌಂಟರ್ ಬುಡ್ಗಾಮ್ನ ಕ್ರಾರ್-ಇ-ಶರೀಫ್ ಪ್ರದೇಶದಲ್ಲಿ ನಡೆಯುತ್ತಿದೆ.
ಹತ್ಯೆಗೀಡಾದ ಭಯೋತ್ಪಾದಕನ ಹತ್ಯೆಯನ್ನು ಭದ್ರತಾ ಮೂಲಗಳು ದೃಢಡಿಸಿವೆ. ಆದರೆ ಈತನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.
ಈ ಪ್ರದೇಶದಲ್ಲಿ ಅಡಗಿರುವ ಹೆಚ್ಚಿನ ಭಯೋತ್ಪಾದಕರನ್ನು ಹೊರಹಾಕಲು ಶೋಧ ಮತ್ತು ಕೂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ.
ಕಾಶ್ಮೀರ ವಲಯ ಪೊಲೀಸರು ನಿನ್ನೆ ಟ್ವೀಟ್ ಮಾಡಿದ್ದು, “ಬುಡ್ಗಾಮ್ನ ಕ್ರಾರ್-ಇ-ಶರೀಫ್ ಪ್ರದೇಶದಲ್ಲಿ ಎನ್ಕೌಂಟರ್ ಪ್ರಾರಂಭವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆಯಲ್ಲಿವೆ. ಹೆಚ್ಚಿನ ವಿವರಗಳಿಗೆ ನಮ್ಮನ್ನು ಅನುಸರಿಸಿದೆ” ಎಂದು ಹೇಳಿದೆ.
#BudgamEncounterUpdate: 01 #unidentified #terrorist killed. Operation going on. Further details shall follow. @JmuKmrPolice https://t.co/ynEnHYa1X0
— Kashmir Zone Police (@KashmirPolice) September 22, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.