ನವದೆಹಲಿ: ಕೋವಿಡ್-19 ಸಂಭಾವ್ಯ ಲಸಿಕೆಯನ್ನು ಸಮರ್ಪಕವಾಗಿ ವಿತರಣೆ ಮಾಡಲು ಅನುವು ಮಾಡಿಕೊಡುವ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಕೊರತೆ ಇದೆ ಎಂದು ವ್ಯಕ್ತವಾಗಿರುವ ಕಳವಳಕ್ಕೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಪರಿಹಾರ ನೀಡಿದ್ದಾರೆ.
ಕೇಂದ್ರ ಸರಕಾರವು ಲಸಿಕೆ ನೀಡುವ ಪ್ರಕ್ರಿಯೆಗಾಗಿ ಯುನಿವರ್ಸಲ್ ಇಮ್ಯೂನೈಝೇಶನ್ ಪ್ರೋಗ್ರಾಮ್ (ಯುಪಿಐ) ಅನ್ನು ಬಳಕೆ ಮಾಡಿಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಬಿಸಿಜಿ, ಓರಲ್ ಪೋಲಿಯೋ, ಹೆಪಿಟೈಟಿಸ್ ಬಿ ಮತ್ತು ಇತರ ಹಲವಾರು ಲಸಿಕೆಗಳು ಯುಪಿಐ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ. ಕೋವಿಡ್-19ಗೂ ಇದು ಪೂರಕವಾಗಲಿದೆ. ಇದರ ಅಡಿಯಲ್ಲೇ ಕೋವಿಡ್ ಲಸಿಕೆ ಪ್ರಕ್ರಿಯೆಯನ್ನು ಕೂಡ ನಡೆಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
“ಯುನಿವರ್ಸಲ್ ಇಮ್ಯೂನೈಝೇಶನ್ ಪ್ರೋಗ್ರಂ” ಅಡಿಯಲ್ಲಿನ ಪ್ರಕ್ರಿಯೆಯನ್ನೇ ಕೋವಿಡ್ ಲಸಿಕೆ ವಿತರಣೆಯಲ್ಲೂ ಅನುಸರಿಸಬೇಕಾಗುತ್ತದೆ” ಎಂದು ಅವರು ಸಂಸತ್ತಿಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಸರ್ಕಾರವು ಮೂರು ವರ್ಷಗಳಲ್ಲಿ ಶೇಕಡ 30ರಷ್ಟು ಜನಸಂಖ್ಯೆಗೆ ಸಂಭಾವ್ಯ ಲಸಿಕೆಯನ್ನು ನೀಡಲು ಸಮರ್ಥವಾಗಿದೆ ಎಂದು ಸ್ಟ್ಯಾಂಡ್ಫೋರ್ಡ್ ಬರ್ನ್ಸ್ಟೀನ್ ಊಹಿಸಿದೆ. ಇದಕ್ಕೆ ತಗಲುವ ವೆಚ್ಚ 2 ಬಿಲಿಯನ್ ಡಾಲರ್ ಎಂದು ಅದು ಅಂದಾಜಿಸಿದೆ.
ಪ್ರಸ್ತುತ ಭಾರತದಲ್ಲಿ ಮೂರು ಲಸಿಕೆಗಳು ಮಾನವ ಪ್ರಯೋಗದ ಪ್ರಕ್ರಿಯೆಯಲ್ಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.