
ನವದೆಹಲಿ: ದೇಶದ 8 ಸಮುದ್ರ ತೀರಗಳನ್ನು ಪ್ರತಿಷ್ಠಿತ ‘ ಬ್ಲೂ ಫ್ಲ್ಯಾಗ್’ ಪ್ರಮಾಣಪತ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಕೇಂದ್ರ ಪರಿಸರ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ತಿಳಿಸಿದ್ದಾರೆ.
8 ಸಮುದ್ರ ತೀರಗಳಲ್ಲಿ ಕರ್ನಾಟಕದ ಎರಡು ಸಮುದ್ರತೀರಗಳು ಆಯ್ಕೆಯಾಗಿರುವುದು ರಾಜ್ಯಕ್ಕೆ ಹೆಮ್ಮೆ ತಂದಿದೆ. ಉತ್ತರಕನ್ನಡದ ಹೊನ್ನಾವರದ ‘ಇಕೋ ಬೀಚ್’ ಮತ್ತು ಉಡುಪಿಯ ಪಡುಬಿದ್ರೆಯ ಕಡಲತೀರಗಳನ್ನು ‘ಬ್ಲೂ ಫ್ಲ್ಯಾಗ್’ ಪ್ರಮಾಣಪತ್ರಕ್ಕೆ ಶಿಫಾರಸು ಮಾಡಲಾಗಿದೆ.
ಗುಜರಾತಿನ ಶಿವರಾಜಪುರ, ದಿಯು ಮತ್ತು ದಾಮನ್ನ ಘೋಗ್ಲಾ, ಕೇರಳದ ಕಪ್ಪದ್, ಒಡಿಶಾದ ಗೋಲ್ಡನ್ ಬೀಚ್, ಆಂಧ್ರಪ್ರದೇಶದ ಋಷಿಕೊಂಡ, ಅಂಡಮಾನ್ ಮತ್ತು ನಿಕೋಬಾರ್ನ ರಾಧಾನಗರ ಕಡಲತೀರಗಳು ಬ್ಲೂ ಫ್ಲ್ಯಾಗ್ ಪ್ರಮಾಣಪತ್ರಕ್ಕೆ ಶಿಫಾರಸ್ಸುಗೊಂಡಿವೆ.
ಬ್ಲೂಫ್ಲ್ಯಾಗ್ ಕಡಲತೀರಗಳಿಗೆ ವಿಶ್ವದ ಅತ್ಯಂತ ಮಾನ್ಯತೆ ಪಡೆದ ಸ್ವಯಂಪ್ರೇರಿತ ಪ್ರಶಸ್ತಿಗಳಲ್ಲಿ ಒಂದಾಗಿದೆ.
ಸ್ವಚ್ಛತೆ, ನೀರಿನ ಗುಣಮಟ್ಟ, ಪರಿಸರ ಸ್ನೇಹಿ ವಾತಾವರಣ, ಸುರಕ್ಷತೆ ಮುಂತಾದ ಅಂಶಗಳನ್ನು ಪರಿಗಣಿಸಿ ಪ್ರಮಾಣಪತ್ರವನ್ನು ಡೆನ್ಮಾರ್ಕ್ನ ಕೋಪನ್ ಹೇಗ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ‘ಪರಿಸರ ಶಿಕ್ಷಣಕ್ಕಾಗಿ ವೇದಿಕೆ’ (ಎಫ್ಇಇ) ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


