
ನವದೆಹಲಿ: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿರುವ ಈ ಶುಭ ಸಂದರ್ಭದಲ್ಲಿ ರಾಮಭಕ್ತರು ಮತ್ತು ಬಿಜೆಪಿ ಸಂಸದರು ಹೊಸ ರಥಯಾತ್ರೆಯನ್ನು ಆರಂಭ ಮಾಡಿದ್ದಾರೆ. ಈ ರಥಯಾತ್ರೆಯು ದಕ್ಷಿಣದ ಪವಿತ್ರ ಕ್ಷೇತ್ರ ರಾಮೇಶ್ವರನಿಂದ ಆಯೋಧ್ಯೆ ನಗರಕ್ಕೆ ಸಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17ರಂದು ರಥಯಾತ್ರೆಗೆ ಆರಂಭವನ್ನು ನೀಡಲಾಗಿದೆ. ರಾಮೇಶ್ವರಂ ದೇಗುಲದಲ್ಲಿ ವಿಶೇಷ ಪೂಜೆಯನ್ನು ನಡೆಸಿದ ಬಳಿಕ ಇದಕ್ಕೆ ಚಾಲನೆ ನೀಡಲಾಯಿತು.
ಈ ರಥಯಾತ್ರೆಯು ಅತ್ಯಂತ ಭಿನ್ನವಾಗಿರಲಿದೆ. ಶ್ರೀರಾಮ್ ಎಂದು ಬರೆಯಲ್ಪಟ್ಟ 613 ಕೆಜಿ ತೂಕವನ್ನು ಹೊಂದಿರುವ ಕಂಚಿನ ಗಂಟೆಯನ್ನು ಹೊತ್ತುಕೊಂಡು ರಥವು ಯಾತ್ರೆ ನಡೆಸಲಿದೆ. ಈ ರಥದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣ ಹಾಗೂ ಹಣಮಂತನ ವಿಗ್ರಹಗಳೂ ಇರಲಿವೆ.
ಈ ಹಿಂದೆ ಬಿಜೆಪಿ ಧುರೀಣ ಎಲ್ ಕೆ ಅಡ್ವಾಣಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಉದ್ದೇಶದೊಂದಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಐತಿಹಾಸಿಕ ರಥಯಾತ್ರೆಯನ್ನು ನಡೆಸಿದ್ದರು. ಇದೀಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಈ ಸಂದರ್ಭದಲ್ಲೂ ರಾಮೇಶ್ವರಂ ನಿಂದ ಅಯೋಧ್ಯೆಗೆ ರಥಯಾತ್ರೆ ನಡೆಸಲಾಗುತ್ತಿದೆ.
600 ಕಿಲೋಗ್ರಾಂ ತೂಕದ ಮತ್ತೊಂದು ಕಂಚಿನ ಗಂಟೆಯನ್ನು ಎರಲ್ ರಾಮಕೃಷ್ಣ ನಾಡರ್ ಎಂಬ ವ್ಯಾಪಾರಿಯ ಅಂಗಡಿಯಲ್ಲಿ ತಯಾರಿಸಲಾಗುತ್ತಿದೆ. ಪ್ರಸ್ತಾವಿತ ರಾಮ ಮಂದಿರದಲ್ಲಿ ಆಂಧ್ರ ಮತ್ತು ಇತರ ರಾಜ್ಯಗಳ ಗಂಟೆಗಳನ್ನೂ ಕೂಡ ಸ್ಥಾಪಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



