ನವದೆಹಲಿ: ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಒಂದು ವರ್ಷಗಳ ಅವಧಿಗೆ ಸಚಿವರುಗಳ, ಸಂಸದರ ವೇತನ ಮತ್ತು ಭತ್ಯೆಯನ್ನು ಕಡಿತಗೊಳಿಸುವ ಮಹತ್ವಪೂರ್ಣ ಮಸೂದೆಗೆ ಇಂದು ರಾಜ್ಯಸಭೆಯಲ್ಲಿ ಅನುಮೋದನೆ ಸಿಕ್ಕಿದೆ.
ಸಚಿವರುಗಳ ವೇತನ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ 2020 ಇಂದು ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿದೆ.
ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಮತ್ತು ಪ್ರಲ್ಹಾದ್ ಜೋಷಿ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡನೆಗೊಳಿಸಿದರು.
ಈ ಮಸೂದೆಯ ಅನ್ವಯ ಸಂಸದರ ವೇತನ ಒಂದು ವರ್ಷಗಳ ಅವಧಿಯವರೆಗೆ ಶೇಕಡಾ 30ರಷ್ಟು ಕಡಿತವಾಗಲಿದೆ. ಅದರಂತೆ ವಿವಿಧ ಕಾರ್ಯಗಳಿಗಾಗಿ ನೀಡುವ ಭತ್ಯೆಯಲ್ಲೂ ಶೇ.30ರಷ್ಟು ಕಡಿತವಾಗಲಿದೆ.
ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಸಚಿವರುಗಳ ವೇತನವನ್ನು ಕಡಿತಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಈ ವಾರ ಆರಂಭವಾಗಿರುವ ಸಂಸತ್ತಿನ ಮಳೆಗಾಲದ ಅಧಿವೇಶನ ಅ.1ರವರೆಗೂ ಮುಂದುವರಿಯಲಿದೆ. ಅಧಿವೇಶನದಲ್ಲಿ ಇನ್ನಷ್ಟು ಮಹತ್ವಪೂರ್ಣ ಮಸೂದೆಗಳು ಮಂಡನೆಗೊಳ್ಳುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.