ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ. ಈ ಸಂದರ್ಭದಲ್ಲಿ ನಮೋ ಬಗ್ಗೆ ತಿಳಿಯಿರಿ ಎಂಬ ರಸಪ್ರಶ್ನೆ ಸ್ಪರ್ಧೆಯೊಂದನ್ನು ಆಯೋಜನೆ ಮಾಡಲಾಗಿದ್ದು, ಇದರಲ್ಲಿ ವಿಜೇತರಾದವರಿಗೆ ಪ್ರಧಾನಿ ಮೋದಿ ಅವರ ಹಸ್ತಾಕ್ಷರ ಇರುವ ಪುಸ್ತಕಗಳನ್ನು ಬಹುಮಾನವಾಗಿ ನೀಡಲು ಬಿಜೆಪಿ ಸಿದ್ಧತೆ ನಡೆಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಪ್ರಧಾನಿ ಮೋದಿ ಬಗ್ಗೆ ನಿಮಗೆಷ್ಟು ಗೊತ್ತು?. ನಮೋ ಬಗ್ಗೆ ತಿಳಿಯಿರಿ, ಕ್ವಿಜ್ ನಲ್ಲಿ ಭಾಗವಹಿಸಿ ಎಂಬುದಾಗಿ ತಿಳಿಸಿದೆ. ಅಲ್ಲದೆ ಈ ರಸಪ್ರಶ್ನೆಯಲ್ಲಿ ಗೆದ್ದವರು ಪ್ರಧಾನಿ ಮೋದಿ ಅವರ ಹಸ್ತಾಕ್ಷರ ಹೊಂದಿರುವ ಪುಸ್ತಕಗಳನ್ನು ಬಹುಮಾನವಾಗಿ ಪಡೆಯಲಿದ್ದೀರಿ ಎಂದು ಬರೆದುಕೊಂಡಿದೆ.
ಇನ್ನು ನೀವೂ ಸಹ ಪ್ರಧಾನಿ ಮೋದಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಲು ಬಯಸುವಿರಾದರೆ ನಮೋ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ, ನಂತರ ವಿಡಿಯೋ ಚಿತ್ರೀಕರಣ ನಡೆಸಿ ಅದನ್ನು ಅಪ್ಲಿಕೇಶನ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ಶುಭಾಶಯಗಳನ್ನು ತಿಳಿಸುವಂತೆಯೂ ಬಿಜೆಪಿ ಟ್ವೀಟ್ ನಲ್ಲಿ ತಿಳಿಸಿದೆ.
How much do you know about PM Shri @narendramodi?
Take 'The Know NaMo Quiz' on NaMo App – https://t.co/f0ytXY07wP
Winners walk away with books signed by PM Narendra Modi himself! #HappyBdayNaMo pic.twitter.com/jxQ5M4sNd5
— BJP (@BJP4India) September 17, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.