ನವದೆಹಲಿ: ದೇಶದ ಅತಿ ದೊಡ್ಡ ಡೈರಿ ಕೋಪರೇಟಿವ್ ಅಮೂಲ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷವಾದ ರೀತಿಯಲ್ಲಿ ಜನ್ಮದಿನದ ಶುಭಾಶಯಗಳನ್ನು ತಿಳಿಸಿದೆ.
ಕಿರು ವಿಡಿಯೋವನ್ನು ಬಿಡುಗಡೆ ಮಾಡಿರುವ ಅಮೂಲ್, ಅದರಲ್ಲಿ ಪ್ರಧಾನಿಯವರ ಪ್ರಸಿದ್ಧ ಮಾತುಗಳನ್ನು ಬಳಸಿದೆ. ಅಭಿವೃದ್ಧಿ ಮತ್ತು ಭವಿಷ್ಯದ ಆಶಾವಾದವನ್ನು ಒಳಗೊಂಡ ಭಾಷಣದ ತುಣುಕುಗಳನ್ನು ಇದರಲ್ಲಿ ನಾವು ಕೇಳಬಹುದು.
ಈ ವಿಡಿಯೋದಲ್ಲಿ ಅಮೂಲ್ ಮತ್ತು ಮೋದಿಯವರ ಸೃಜನಶೀಲ ಕಾರ್ಟೂನ್ಗಳನ್ನು ಕಾಣಬಹುದು.
3.6 ಮಿಲಿಯನ್ ಗುಜರಾತ್ ರೈತರ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ 70ನೇ ಜನ್ಮದಿನದ ಶುಭಾಶಯಗಳು ಎಂದು ಕೊನೆಯಲ್ಲಿ ಅಮೂಲ್ ಹೇಳಿದೆ.
ಅಮೂಲ್ ಬಾಲಕಿ ಮತ್ತು ಮೋದಿಯನ್ನು ಒಳಗೊಂಡ ಈ ವಿಡಿಯೋದಲ್ಲಿ, ಅತ್ಯಂತ ಆಕರ್ಷಕವಾದ ವಾಕ್ಯಗಳನ್ನು ಬರೆಯಲಾಗಿದೆ. ಎಂದಿನಂತೆ ಇದು ಅಮೂಲ್ ಜಾಹೀರಾತಿನ ಸೃಜನಾತ್ಮಕತೆಯನ್ನು ಪ್ರತಿಬಿಂಬಿಸಿದೆ.
ಅಮೂಲ್ ಶುಭಾಶಯಕ್ಕೆ ಮೋದಿ ಕೂಡ ಅಷ್ಟೇ ಸೊಗಸಾಗಿ ಧನ್ಯವಾದ ಹೇಳಿದ್ದಾರೆ. “ಥ್ಯಾಂಕ್ಯೂ ಅಮೂಲ್. ನಿನ್ನ ಶುಭಾಶಯ ನಿನ್ನ ಐಸ್ಕ್ರೀ ಮತ್ತು ಚಾಕೋಲೇಟ್ ಅಷ್ಟೇ ಸಿಹಿಯಾಗಿದೆ. ನಿನಗೂ ಆಲ್ ದಿ ಬೆಸ್ಟ್. ಹೊಸ ಹೊಸ ಆವಿಷ್ಕಾರ ಮತ್ತು ಉತ್ಪನ್ನಗಳ ಮೂಲಕ ನೀನು ಭಾರತವನ್ನು ಹೆಮ್ಮೆಪಡಿಸುತ್ತಿದ್ದಿ” ಎಂದಿದ್ದಾರೆ.
Thank you @Amul_Coop! Your wishes are as sweet as your ice creams and chocolates. Best wishes to you as you make India proud with your products and innovations. https://t.co/Yrypgvxj3W
— Narendra Modi (@narendramodi) September 17, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.