ಟೊಕಿಯೋ: ಜಪಾನಿನ ನೂತನ ಪ್ರಧಾನಮಂತ್ರಿಯಾಗಿ ಯೋಷಿಹಿಡೆ ಸುಗಾ ಬುಧವಾರ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಪ್ರಧಾನಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವರು ಜಪಾನ್ ಸಂಸತ್ತಿನ ಕೆಳಮನೆಯ 462 ಮಾನ್ಯ ಮತಗಳ ಪೈಕಿ 314 ಮತಗಳನ್ನು ಪಡೆದು ಸುಲಭ ಗೆಲುವನ್ನು ದಾಖಲಿಸಿದ್ದಾರೆ.
ಜಪಾನಿನ ನೂತನ ಪ್ರಧಾನಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಯೋಷಿಹಿಡೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಇಂಗ್ಲೀಷ್ ಮತ್ತು ಜಪಾನ್ ಭಾಷೆಯಲ್ಲಿ ಟ್ವಿಟ್ ಮಾಡುವ ಮೂಲಕ ಅವರು ಅಭಿನಂದನೆ ತಿಳಿಸಿರುವುದು ವಿಶೇಷ.
“ಜಪಾನ್ ಪ್ರಧಾನಿಯಾಗಿ ನೇಮಕಗೊಂಡಿದ್ದಕ್ಕಾಗಿ ಯೋಷಿಹಿಡೆ ಸುಗಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು ಜಂಟಿಯಾಗಿ ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾನು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಶಿಂಜೋ ಅಬೆ ಅವರ ಸಂಪುಟದಲ್ಲಿದ್ದ ಬಹುತೇಕರು ಸುಗಾ ಅವರ ಸಂಪುಟದಲ್ಲೂ ಮುಂದುವರಿಯುವ ನಿರೀಕ್ಷೆ ಇದೆ. ಅಲ್ಲದೆ ಅಬೆ ಅವಧಿಯ ಎಲ್ಲ ನೀತಿ, ಯೋಜನೆಗಳನ್ನೂ ಸುಗಾ ಸರ್ಕಾರ ಮುಂದುವರಿಸಲಿದೆ ಎಂದು ಮೂಲಗಳು ವರದಿ ಮಾಡಿವೆ.
Heartiest congratulations to Excellency Yoshihide Suga on the appointment as Prime Minister of Japan @kantei. I look forward to jointly taking our Special Strategic and Global Partnership to new heights. @sugawitter
— Narendra Modi (@narendramodi) September 16, 2020
日本国首相へのご就任を心よりお祝い申し上げます。閣下とともに印日特別戦略的グローバルパートナーシップをさらなる高みに到達させることを期待しています。@sugawitter
— Narendra Modi (@narendramodi) September 16, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.