ಧಾರವಾಡ: ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್ ಅನ್ನು ತಿನ್ನುವ ಹುಳಗಳನ್ನು ಪತ್ತೆ ಹಚ್ಚಿದ್ದಾರೆ.
ತನ್ನ ಮಾರ್ಗದರ್ಶಕ ಡಿ. ಸಿ. ಟಿ. ಶಿವಶರಣ್ ಅವರ ಮಾರ್ಗದರ್ಶನದಲ್ಲಿ ಶೀತಲ್ ಕೆಸ್ತಿ ಎಂಬವರು ಪ್ಲಾಸ್ಟಿಕ್ ತಿನ್ನುವ ಹುಳುವನ್ನು ಪತ್ತೆ ಮಾಡಿದ್ದಾರೆ. ಈ ಹುಳುವು ಸಾಮಾನ್ಯವಾಗಿ ಬೇಳೆ, ಅಕ್ಕಿಯಲ್ಲಿ ಕಂಡುಬರುತ್ತದೆ. ಇದನ್ನು ರೈಸ್ ಮೌತ್ ಲಾರ್ವಾ ಎಂದು ಕರೆಯುತ್ತಾರೆ. ಈ ಹುಳು ಪ್ಲಾಸ್ಟಿಕ್ ತಿಂದು ಜೀರ್ಣಿಸಿಕೊಳ್ಳುತ್ತದೆ ಎಂಬ ಅಂಶ ಪ್ರಯೋಗದಲ್ಲೂ ಬಯಲಾಗಿದೆ. ಈ ಆವಿಷ್ಕಾರವನ್ನು ಈ ಹಿಂದೆ ಸ್ಪೇನ್ ವಿಜ್ಞಾನಿಗಳು ಪ್ಲಾಸ್ಟಿಕ್ ತಿನ್ನುವ ಮತ್ತೊಂದು ಸೂಕ್ಷ್ಮಜೀವಿ ಗೆಲ್ಲೇರಿಯಾ ಮೆನೋನೆಲ್ಲಾ ಸಂಶೋಧನೆಯ ಆಧಾರದ ಮೇಲೆ ನಡೆಸಲಾಗಿದೆ.
ಈ ವರದಿಯನ್ನು ಅಂತರರಾಷ್ಟ್ರೀಯ ನಿಯತಕಾಲಿಕೆಯಲ್ಲಿಯೂ ಪ್ರಕಟಿಸಿದ್ದಾರೆ. ಈ ಸಂಬಂಧ ಶೀತಲ್ ಅವರೇ ಮಾಹಿತಿ ನೀಡಿದ್ದು, ಈ ಹಿಂದೆ ಚೀನಾ, ಸ್ಪೇನ್ ಗಳಲ್ಲಿ ನಡೆದ ಸಂಶೋಧನೆಯನ್ನು ಆಧಾರವಾಗಿಟ್ಟುಕೊಂಡು ಈ ಅಧ್ಯಯನ ನಡೆಸಲಾಗಿದೆ. ಈ ಸಂಬಂಧ ನಡೆಸಿದ ಪ್ರಯೋಗದಲ್ಲಿ ಈ ಬಾಲ ಹುಳುಗಳು ಕಡಿಮೆ ಸಾಂಧ್ರತೆಯ ಪ್ಲಾಸ್ಟಿಕ್ಗಳನ್ನು ತಿಂದಿರುವುದು ಪತ್ತೆಯಾಗಿದೆ. ಈ ಹುಳುಗಳ ಮಲ ಪರೀಕ್ಷೆ ಮಾಡಿದಾಗ ಅದರಲ್ಲಿ ಪ್ಲಾಸ್ಟಿಕ್ ಕರಗಬಲ್ಲ ಕಿಣ್ವಗಳು ಪತ್ತೆಯಾಗಿವೆ. ಅದರ ಜೀರ್ಣಾಂಗದಲ್ಲಿ ಅಂತಹ ಕಿಣ್ವಗಳು ಇವೆ ಎಂದು ತಿಳಿಸಿದ್ದಾರೆ.
ಈ ಸಂಶೋಧನೆ ನಡೆಸುವ ಸಲುವಾಗಿ ಬೆಂಗಳೂರಿನ ಕೃಷಿ, ಕೀಟ ಸಂಶೋಧನಾ ರಾಷ್ಟ್ರೀಯ ಸಂಸ್ಥೆಯಿಂದ ಬಾಲದ ಹುಳುಗಳನ್ನು ತರಲಾಯಿತು. ಅವುಗಳ ಪೆಟ್ಟಿಗೆಯಲ್ಲಿ ಕಡಿಮೆ ಸಾಂಧ್ರತೆಯ ಪ್ಲಾಸ್ಟಿಕ್ ತುಂಡುಗಳನ್ನು ಹಾಕಲಾಗಿತ್ತು. ಅಧ್ಯಯನ ಸಂದರ್ಭದಲ್ಲಿ 23% ರಷ್ಟು ಪ್ಲಾಸ್ಟಿಕ್ ಅಂಶಗಳನ್ನು ಈ ಹುಳಗಳು ತಿಂದಿದ್ದವು. ಅವುಗಳ ಮಲದಲ್ಲಿ ಪ್ಲಾಸ್ಟಿಕ್ ಕರಗಬಲ್ಲ ‘ಪಾಲಿ ಎಥಲಿನ್ ಗ್ಲೈಕಾಲ್’ ಅಂಶಗಳು ಪತ್ತೆಯಾಗಿದ್ದು, ಈ ಬಗ್ಗೆ ಮತ್ತಷ್ಟು ಅಧ್ಯಯನ ನಡೆಯಬೇಕಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.