ವಾಷಿಂಗ್ಟನ್: ಒಂದು ವರ್ಷದ ಹಿಂದೆ ಕರ್ತವ್ಯದ ವೇಳೆ ಗುಂಡೇಟಿನಿಂದ ಮೃತಪಟ್ಟ ಭಾರತೀಯ-ಅಮೆರಿಕನ್ ಪೊಲೀಸ್ ಅಧಿಕಾರಿ ಸಂದೀಪ್ ಸಿಂಗ್ ಧಲಿವಾಲ್ ಅವರ ಹೆಸರನ್ನು ಅಮರಗೊಳಿಸಲು ಅಮೆರಿಕ ನಿರ್ಧರಿಸಿದೆ. ಅದಕ್ಕಾಗಿ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಹೂಸ್ಟನ್ನಲ್ಲಿನ ಪೋಸ್ಟ್ ಆಫೀಸ್ವೊಂದಕ್ಕೆ ಅವರ ಹೆಸರನ್ನು ಇಡುವ ಶಾಸನವನ್ನು ಸರ್ವಾನುಮತದಿಂದ ಅಂಗೀಕರಿಸಿದೆ.
ಉಭಯಪಕ್ಷೀಯ ಶಾಸನವಾದ ʼಡೆಪ್ಯೂಟಿ ಸಂದೀಪ್ ಸಿಂಗ್ ಧಲಿವಾಲ್ ಪೋಸ್ಟ್ ಆಫೀಸ್ ಆಕ್ಟ್ʼ ಅನ್ನು ಸೋಮವಾರ ಇಡೀ ಟೆಕ್ಸಾಸ್ ನಿಯೋಗ ಸಹ-ಪ್ರಾಯೋಜಿಸಿತು.
“ಡೆಪ್ಯೂಟಿ ಧಲಿವಾಲ್ ನಮ್ಮ ಸಮುದಾಯವನ್ನು ಅತ್ಯುತ್ತಮವಾಗಿ ಪ್ರತಿನಿಧಿಸಿದ್ದಾರೆ. ಅವರು ಇತರರಿಗೆ ಸೇವೆ ಸಲ್ಲಿಸುವ ಮೂಲಕ ಸಮಾನತೆ, ಬೆಸುಗೆ ಮತ್ತು ಸಮುದಾಯಕ್ಕಾಗಿ ಕೆಲಸ ಮಾಡಿದರು” ಎಂದು ಅಮೆರಿಕ ಕಾಂಗ್ರೆಸ್ ಸದಸ್ಯ ಲಿಜ್ಜೀ ಫ್ಲೆಚರ್ ಹೇಳಿದ್ದಾರೆ.
ಟೆಕ್ಸಾಸ್ ಪೊಲೀಸಸ್ನ ಮೊದಲ ಸಿಖ್ ಆಗಿದ್ದ ಧಲಿವಾಲ್ (42) ಅವರನ್ನು ಸೆಪ್ಟೆಂಬರ್ 27, 2019 ರಂದು ಕರ್ತವ್ಯದ ವೇಳೆ ಕೊಲ್ಲಲಾಯಿತು. ಅವರ ಸಾವಿಗೆ ಇಡೀ ಅಮೆರಿಕ ಅಶ್ರತರ್ಪಣ ಮಾಡಿದೆ. ಅವರನ್ನು ಹೀರೋ ಎಂದು ಪುರಸ್ಕರಿಸಲಾಗಿದೆ.
“ಸಂದೀಪ್ ಸಿಂಗ್ ಧಲಿವಾಲ್ ಅವರ ಹೆಸರಿನ ಪೋಸ್ಟ್ ಆಫೀಸ್ ಅವರ ಸೇವೆ, ಅವರ ತ್ಯಾಗದ ಶಾಶ್ವತ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಅವರ ಸ್ಮರಣೆಯನ್ನು ಗೌರವಿಸುವ ನನ್ನ ಶಾಸನವನ್ನು ಇಂದು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅನ್ನು ಅಂಗೀಕರಿಸಿದೆ ಮತ್ತು ಕಾನೂನಿಗೆ ಸಹಿ ಬೀಳಲು ಕೇವಲ ಒಂದು ಹೆಜ್ಜೆ ಇದೆ ಎಂದು ನಾನು ಕೃತಜ್ಞನಾಗಿದ್ದೇನೆ” ಎಂದು ಲಿಜ್ಜೀ ಫ್ಲೆಚರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.