ನವದೆಹಲಿ: ಭಾರತದ ನೆಚ್ಚಿನ ವಾಹಿನಿ ದೂರದರ್ಶನ ಆರಂಭವಾಗಿ ಇಂದಿಗೆ 61 ವರ್ಷಗಳಾಗಿವೆ. ಸೆ. 15, 1959ರಲ್ಲಿ ಆರಂಭವಾದ ದೂರದರ್ಶನ ವಾಹಿನಿ ಅಂದಿನಿಂದ ಇಂದಿನ ವರೆಗೂ ತನ್ನ ಹಿರಿಮೆಗೆ ಭಂಗ ಉಂಟಾಗದಂತೆ 61 ವರ್ಷಗಳವರೆಗೂ ತನ್ನ ಮೌಲ್ಯಗಳನ್ನು ಕಾಪಾಡಿಕೊಂಡೇ ಬಂದಿದೆ. ಇದ್ದ ವಿಚಾರವನ್ನು ಇದ್ದ ಹಾಗೆಯೇ ಜನರಿಗೆ ತಲುಪಿಸುವ ದೂರದರ್ಶನ ಇಂದಿಗೂ ಬಹು ಜನಪ್ರಿಯ ಎಂದರೂ ತಪ್ಪಾಗಲಾರದೇನೋ.
ಕೆಲವು ವರ್ಷಗಳ ವರೆಗೆ ಯಾವುದೇ ಪ್ರತಿಸ್ಪರ್ಧಿಗಳಿಲ್ಲದೆ ಇದ್ದ ಸಂದರ್ಭದಲ್ಲಿ ಈ ವಾಹಿನಿ ಜನರಿಗೆ ಪ್ರಿಯವೆನಿಸುವ ಪುರಾಣದ ಕಾರ್ಯಕ್ರಮಗಳನ್ನು ಬಿತ್ತರಿಸಿ ಜನರ ಹೃದಯದಲ್ಲಿ ನೆಲೆಯೂರಿತ್ತು. ಪ್ರಸ್ತುತ ಅನೇಕ ಸುದ್ದಿ ವಾಹಿನಿಗಳು, ಮನೊರಂಜನಾ ವಾಹಿನಿಗಳು ಆರಂಭವಾಗಿದ್ದರೂ ದೂರದರ್ಶನ ಮಾತ್ರ ತನ್ನ ಹಿಂದಿನ ಗಾಂಭಿರ್ಯವನ್ನೇ ಇಂದಿಗೂ ಉಳಿಸಿಕೊಂಡು ಬೆಳೆಸಿಕೊಂಡು ಬಂದಿದೆ. ಲಾಕ್ಡೌನ್ನಿಂದಾಗಿ ಜನರು ಮನೆಯಲ್ಲೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಹಿಂದೆ ಪ್ರಸಾರವಾಗುತ್ತಿದ್ದ ರಾಮಾಯಣ, ಮಹಾಭಾರತ ದಂತಹ ಪೌರಾಣಿಕ ವಿಚಾರಗಳನ್ನು ಮತ್ತೆ ಪ್ರಸ್ತುತ ಪಡಿಸುವ ಮೂಲಕ ಸಮಾಜದಲ್ಲಿ ಮತ್ತಷ್ಟು ಭದ್ರವಾದ ಸ್ಥಾನ ಗಿಟ್ಟಿಸಿಕೊಂಡಿದೆ ದೂರದರ್ಶನ ಎಂದರೆ ತಪ್ಪಾಗಲಾರದು.
ದೂರದರ್ಶನದ 61 ನೇ ವರ್ಷಕ್ಕೆ ಹಲವರು ಶುಭಾಶಯ ತಿಳಿಸಿ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆಲ್ ಇಂಡಿಯಾ ರೇಡಿಯೋ ‘ 1959 ರ ಇದೇ ದಿನದಂದು ದೂರದರ್ಶನ ವಾಹಿನಿ ಆರಂಭವಾಯಿತು. ಈ ವಾಹಿನಿಯ ಜೊತೆಗೆ ಎಣಿಸಲಸದಳವಾದ ನೆನಪುಗಳು ಜನರಿಗೆ ಇದೆ. ಲಾಕ್ಡೌನ್ನಿಂದಾಗಿ ಕಂಗೆಟ್ಟಿದ್ದ ಜನರಿಗೆ ಪುರಾಣ ಧಾರಾವಾಹಿಗಳ ಮೂಲಕ ಮನರಂಜಿಸಿ ನಮ್ಮೆಲ್ಲರ ಹೃದಯ ಗೆದ್ದಿದೆ ಎಂದು ತಿಳಿಸಿದೆ.
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು, ದೂರದರ್ಶನ ದಿನದ ಶುಭಾಶಯಗಳು. ದೂರದರ್ಶನ ನಮ್ಮ ಜೀವನದ ಭಾಗವೇ ಆಗಿದೆ. ರಾಮಾಯಣ, ಮಹಾಭಾರತದಂತಹ ಉತ್ತಮ ಕಾರ್ಯಕ್ರಮಗಳನ್ನು ದೂರದರ್ಶನ ಪ್ರಸಾರ ಮಾಡಿದೆ. ಇಂದಿಗೂ ಡಿಡಿ ಭಾರತದ ಲೋಕ ಸೇವಾ ಪ್ರಸಾರಕವೇ ಹೌದು. ಇಂದು ಡಿಡಿ ನ್ಯೂಸ್, ಡಿಡಿ ಕಿಸಾನ್, ಡಿಡಿ ಭಾರತಿ, ಡಿಡಿ ನ್ಯಾಷನಲ್ ಗಳ ಮೂಲಕ ಜನರಿಗೆ ಮಾಹಿತಿ ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಡಾ. ಜಿತೇಂದ್ರ ಸಿಂಗ್ ಅವರು, 1959 ರ ಇದೇ ದಿನದಂದು ಡಿಡಿ ಲೋಕಾರ್ಪಣೆಯಾಯಿತು. ಅಂದಿನಿಂದ ಇಂದಿನವರೆಗೂ ಹಲವಾರು ಕಾರ್ಯಕ್ರಮಗಳ ಮೂವಕ ಡಿಡಿ ನಮ್ಮಲ್ಲಿ ಮರೆಯಲಾಗದ ಅಗಣಿತ ನೆನಪುಗಳನ್ನು ನೀಡಿದೆ. ನಮ್ಮ ಹೃದಯಕ್ಕೆ ಆಪ್ತವಾಗಿದೆ ಎಂದು ಹೇಳಿದ್ದಾರೆ.
ಈ ಸಂಬಂಧ ಸದ್ಗುರು ಜಗ್ಗಿ ವಾಸುದೇವ ಅವರೂ ದೂರದರ್ಶನದ ಈ ವರೆಗಿನ ಯಶಸ್ವಿ ಪ್ರಯಾಣಕ್ಕೆ ಶುಭಾಶಯ ತಿಳಿಸಿದ್ದಾರೆ.
Doordarshan turns 61!#OnThisDay in 1959, Doordarshan was launched. Weaving countless moments of memories with its evergreen shows, since then, it has ruled our hearts.
Even during the lockdown, with shows like Ramayana, Mahabharata, Shaktimaan, it captivated hearts.
1/n pic.twitter.com/I2YIZpHqNA
— ALL INDIA RADIO (@AkashvaniAIR) September 15, 2020
दूरदर्शन अपने जीवन का भाग है। रामायण, महाभारत से लेकर न जाने कितने अच्छे कार्यक्रम दूरदर्शन ने दिए। आज भी भारत का लोक सेवा प्रसारक दूरदर्शन, DDNews, DDKisan, DDBharati, DDNational और DDRetro इतने चैनल्स के द्वारा निरंतर हम सबसे जुड़ा है।
Happy #DoordarshanDay ! pic.twitter.com/RLF9D85n2M
— Prakash Javadekar (@PrakashJavdekar) September 15, 2020
#Doordarshan comes of age, turns 61! #OnThisDay in 1959, Doordarshan was launched. Weaving countless moments of memories with its evergreen shows, since then, it has ruled our hearts. Even during the lockdown, with shows like Ramayana, Mahabharata,Shaktimaan,it captivated hearts. pic.twitter.com/LyaNo4XduU
— Dr Jitendra Singh (@DrJitendraSingh) September 15, 2020
.@SadhguruJV on "61 years of Doordarshan's phenomenal service to the nation". pic.twitter.com/wA30ibRokm
— Prasar Bharati (@prasarbharati) September 15, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.