ಚೆನ್ನೈ: ಕೆಲವು ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಆತ್ಮನಿರ್ಭರ ಭಾರತದಲ್ಲಿ ಆಟಿಕೆಗಳ ತಯಾರಿಕೆಯ ಬಗ್ಗೆ ಮಾತನಾಡಿದ್ದರು. ಇದರಿಂದ ಪ್ರೇರಿತವಾಗಿರುವ ಫನ್ಸ್ಕೂಲ್ ಇಂಡಿಯಾ ಎಂಬ ಚೆನ್ನೈನ ಆಟಿಕೆ ತಯಾರಿಕಾ ಕಂಪೆನಿ ದೇಶೀಯ ಆಟಿಕೆಗಳನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸುತ್ತಿದೆ.
ಈ ಸಂಬಂಧ ಮಾತನಾಡಿರುವ ಕಂಪೆನಿಯ ಸಿಇಒ ಆರ್. ಜಸ್ವಂತ್, ದೇಶೀಯ ಆಟಿಕೆಗಳನ್ನು ತಯಾರಿಸುವ ಮೂಲಕ ದೇಶದಲ್ಲಿ ಸಂಸ್ಥೆಯು ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿರುವುದಾಗಿಯೂ ಸಂಸ್ಥೆ ಮಾಹಿತಿ ನೀಡಿದೆ. ಅದರೊಂದಿಗೆ ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ದೇಶದ ಗ್ರಾಮೀಣ ಭಾಗಗಳಲ್ಲಿಯೂ ವಿಸ್ತರಣೆ ಮಾಡುವ ಸಲುವಾಗಿ ಗಮನ ಹರಿಸಿದೆ ಎಂದು ತಿಳಿಸಿದ್ದಾರೆ. ಮುಂದಿನ ವರ್ಷದ ಒಳಗಾಗಿ ನೂರು ಆಟಿಕೆಗಳನ್ನು ತಯಾರು ಮಾಡುವ ಸಲುವಾಗಿ ಚಿಂತನೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರಕಟಿಸುವ ನೀತಿ ಕ್ರಮಗಳನ್ನು ಎದುರು ನೋಡುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ.
ಭಾರತೀಯ ಆಟಿಕೆಗಳ ಆಭಿವೃದ್ಧಿ ಬಗ್ಗೆ ಕಂಪೆನಿ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಸ್ಥಳೀಯ ಉತ್ಪಾದಕರ ಜೊತೆಗೂ ಕೆಲಸ ಮಾಡಲಿದ್ದೇವೆ. ಇದು ಗುಣಮಟ್ಟದ ಆಟಿಕೆಗಳ ತಯಾರಿಗೆ ನೆರವಾಗುವುದಲ್ಲದೆ, ಸ್ಥಳೀಯ ಸ್ವ ಉದ್ಯೋಗ ಮಾಡುವವರಿಗೂ ಸಹಾಯವಾಗಲಿದೆ ಎಂದು ಜಸ್ವಂತ್ ತಿಳಿಸಿದ್ದಾರೆ. ಕೊರೋನಾ ಕಾರಣದಿಂದ ಕಳೆದ ಎಪ್ರಿಲ್ ತಿಂಗಳಿನಿಂದ ಘಟಕವನ್ನು ಸ್ಥಗಿತಗೊಳಿಸಲಾಗಿದೆ. ಈಗ ದೇಶೀಯ ಎಂಬ ಪರಿಕಲ್ಪನೆ ಜೊತೆಗೆ ಮತ್ತೆ ಉತ್ಪಾದನೆ ಆರಂಭ ಮಾಡುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.