ನವದೆಹಲಿ: ದೇಶಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಅರ್ಪಿಎಫ್) ಸಿಬ್ಬಂದಿಗಳು ಸಾರ್ವಜನಿಕರಿಗೆ ಮತ್ತು ಮುಂಚೂಣಿ ಯೋಧರಿಗೆ ಮುಖಗವಸುಗಳನ್ನು ತಯಾರಿಸುವ ಕಾರ್ಯವನ್ನು ಕೈಗೊಂಡಿದ್ದಾರೆ.
ಸಹಾಯಕ ಕಮಾಂಡೆಂಟ್ ಅಜಯ್ ಶರ್ಮಾ ಅವರ ಪ್ರಕಾರ, ಜಮ್ಮುವಿನ ಸಿಆರ್ಪಿಎಫ್ ಪಡೆ ಈ ವರ್ಷದ ಜನವರಿಯಲ್ಲೇ ಫೇಸ್ ಮಾಸ್ಕ್ ತಯಾರಿಸಲು ಪ್ರಾರಂಭಿಸಿದೆ, ಈ ಪ್ರದೇಶದಲ್ಲಿ ವೈಯಕ್ತಿಕ ರಕ್ಷಣಾ ಸಾಧನಗಳು ಸುಲಭವಾಗಿ ಲಭ್ಯವಿಲ್ಲದ ಕಾರಣ ಫೇಸ್ ಮಾಸ್ಕ್ ತಯಾರಿಕೆಯನ್ನು ಅದು ಆರಂಭಿಸಿತು.
“ಸಾಂಕ್ರಾಮಿಕವು ಈ ವರ್ಷದ ಆರಂಭದಲ್ಲಿ ದೇಶದಲ್ಲಿ ಕಾಣಿಸಿಕೊಂಡಿತ್ತು, ಈ ವೇಳೆ ಪಿಪಿಇ ಕಿಟ್ಗಳು ಎಲ್ಲೆಡೆ ಸುಲಭವಾಗಿ ಲಭ್ಯವಿರಲಿಲ್ಲ, ಈ ಕಾರಣ ನಾವು ಸ್ವಂತವಾಗಿ ಉಪಕರಣಗಳ ತಯಾರಿಕೆಗೆ ಮುಂದಾದೆವು ಮತ್ತು ಎಲ್ಲರಿಗೂ ವಿತರಿಸಲು ನಿರ್ಧರಿಸಿದೆವು ”ಎಂದು ಶರ್ಮಾ ತಿಳಿಸಿದ್ದಾರೆ.
“ನಾವು ಮುಖಗವಸು ಮತ್ತು ಮುಖ ಕವಚಗಳನ್ನು ಒಳಗೊಂಡಂತೆ ಪಿಪಿಇ ಕಿಟ್ಗಳನ್ನು ತಯಾರಿಸುತ್ತೇವೆ. ಕೊರೋನಾವೈರಸ್ ಹರಡುವುದನ್ನು ನಿಯಂತ್ರಿಸಲು ಲಾಕ್ಡೌನ್ ಘೋಷಿಸಿದಾಗ, ಸಿಆರ್ಪಿಎಫ್ ಸಿಬ್ಬಂದಿ ಕೋವಿಡ್ ಯೋಧರಾಗಿ ಮುಂಚೂಣಿಯಲ್ಲಿ ನಿಂತು ಕೆಲಸ ಮುಂದುವರಿಸಿದರು. ನಮ್ಮ ಕರ್ತವ್ಯಗಳು ಸ್ವಲ್ಪವೂ ಬದಲಾಗಲಿಲ್ಲ”ಎಂದು ಅವರು ಹೇಳಿದ್ದಾರೆ.
ಸಹಾಯವಾಣಿಗಳ ಮೂಲಕ ಫೇಸ್ ಮಾಸ್ಕ್ ಅನ್ನು ವಿತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
“ನಮ್ಮಲ್ಲಿ ಸಹಾಯವಾಣಿ ಇದ್ದು, ಅದರ ಮೂಲಕ ಜನರು ಆಹಾರಧಾನ್ಯಗಳಿಗೆ ಮನವಿ ನೀಡಬಹುದು. ಮುಂಚೆ, ಕೇವಲ ಆಹಾರ ಧಾನ್ಯಗಳನ್ನು ಮಾತ್ರ ಸಹಾಯವಾಣಿ ಮೂಲಕ ವಿತರಣೆ ಮಾಡುತ್ತಿದ್ದೆವು, ಆದರೆ ಈಗ ಜನರು ತಮ್ಮನ್ನು ಮತ್ತು ತಮ್ಮ ಕುಟುಂಬಗಳನ್ನು ರಕ್ಷಿಸಿಕೊಳ್ಳಲು ಹ್ಯಾಂಡ್ ಸ್ಯಾನಿಟೈಜರ್ಗಳು ಮತ್ತು ಫೇಸ್ ಮಾಸ್ಕ್ಗಳನ್ನು ಇದರ ಮೂಲಕ ಪಡೆಯುತ್ತಿದ್ದಾರೆ”ಎಂದು ಶರ್ಮಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.