ಗಯಾ: ತನ್ನ ಊರಿನ ಕೆರೆಗೆ ನೀರು ಹರಿಸಿ, ಜನರ ನೀರಿನ ಬವಣೆ ಇಂಗಿಸುವ ಮೂಲಕ ಬಿಹಾರದ ಈ ವ್ಯಕ್ತಿ ಈಗ ಎಲ್ಲರಿಂದಲೂ ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದಾರೆ.
ಬಿಹಾರ ರಾಜ್ಯದ ಲಹ್ತುವ ಎಂಬಲ್ಲಿನ ಕೋಠಿಲಾವಾ ಎಂಬ ಗ್ರಾಮಕ್ಕೆ ನೀರು ಹರಿಯುವಂತೆ ಮಾಡಲು ಲೌಂಗಿ ಬುಹಿಯನ್ ಎಂಬುವವರು ಸತತ 30 ವರ್ಷಗಳ ಕಾಲ ಏಕಾಂಗಿಯಾಗಿ ಶ್ರಮಿಸಿ, ಇದೀಗ 3 ಕಿ. ಮೀ. ಉದ್ದದ ಕಾಲುವೆ ನಿರ್ಮಿಸಿ ಸುದ್ದಿಯಾಗಿದ್ದಾರೆ. ಸಮೀಪದ ಗುಡ್ಡದಿಂದ ಹಳ್ಳಿಗೆ ನೀರು ಹರಿಯುವಂತೆ ಮಾಡಿದ್ದು, ಇದೀಗ ಈ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
ಊರಿನವರು ಇವರ ಕಾರ್ಯಕ್ಕೆ ಸಹಕಾರ ನೀಡದೇ ಇದ್ದ ಸಂದರ್ಭದಲ್ಲಿಯೂ ಛಲ ಬಿಡದೆ ಕಾರ್ಯನಿರ್ವಹಿಸಿ ಫಲ ಗಿಟ್ಟಿಸಿಕೊಂಡಿದ್ದಾರೆ. ಈ ಹಳ್ಳಿಯ ಜನರು ಕೃಷಿ, ಹೈನುಗಾರಿಕೆ ಮುಂತಾದ ಚಟುವಟಿಕೆಗಳಲ್ಲೇ ಬದುಕು ಕಟ್ಟಿಕೊಂಡಿದ್ದು, ನೀರಿನ ಸಮಸ್ಯೆಯಿಂದಾಗಿ ಹಳ್ಳಿಯನ್ನೇ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಎದುರಾಗಿತ್ತು. ಈ ಸಂದರ್ಭದಲ್ಲಿ ಬುಹಿಯನ್ ಅವರು ಮಳೆಗಾಲದಲ್ಲಿ ಗುಡ್ಡದ ಮೇಲೆ ಸುರಿದ ನೀರು ವೃಥಾ ನದಿ ಸೇರುವಂತಾಗಿದೆ. ಕಾಲುವೆ ನಿರ್ಮಾಣ ಮಾಡಿ ಅದನ್ನು ಹಳ್ಳಿಯೊಳಕ್ಕೆ ಹರಿಯುವಂತೆ ಮಾಡಿದರೆ ಜನರ ನೀರಿನ ಭವಣೆಗೆ ಮುಕ್ತಿ ಸಿಗುತ್ತದೆ ಎಂದು ಯೋಚಿಸಿ, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ, 30 ವರ್ಷಗಳ ಶ್ರಮಕ್ಕೆ ಈಗ ಪ್ರತಿಫಲ ಕಂಡುಕೊಂಡು ಮಾದರಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.