ಶಿವಮೊಗ್ಗ: ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಕಡಿಮೆ. ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕಾದರೆ ಖಾಸಗಿ ಶಾಲೆಗಳೇ ಬೆಸ್ಟ್ ಎಂದು ಹಲವು ಪಾಲಕರ ಅಭಿಪ್ರಾಯ. ಇದಕ್ಕೆ ಸರಿಯಾಗಿ ಗ್ರಾಮೀಣ ಸರ್ಕಾರಿ ಶಾಲೆಗಳೂ ಸರಿಯಾದ ಮೂಲ ಸೌಕರ್ಯಗಳಿಲ್ಲದೆ, ಶಿಕ್ಷಕರ ಕೊರತೆ ಸೇರಿದಂತೆ ಹಲವಾರು ವಿಧದ ಸಮಸ್ಯೆಗಳನ್ನು ಎದುರಿಸುವುದು ಸಾಮಾನ್ಯ ವಿಚಾರ.
ಆದರೆ ಶಿವಮೊಗ್ಗ ಜಿಲ್ಲೆಯ ತೇವರ ಚಟ್ನಹಳ್ಳಿಯ ಸರ್ಕಾರಿ ಶಾಲೆ ಸದ್ಯ ಮಕ್ಕಳ, ಪೋಷಕರ ಒಟ್ಟಾಗಿ ಹೇಳುವುದಾದರೆ ಸಾರ್ವಜನಿಕರ ಗಮನ ಸೆಳೆಯುವ ವಿಚಾರವಾಗಿ ಬದಲಾಗಿದೆ. ಈ ಊರಿನ ಸ್ಥಳೀಯರ ಶ್ರಮದಿಂದ ಈ ಶಾಲೆ ಇದೀಗ ಮನೆಮಾತಾಗಿದೆ. ಸರ್ಕಾರಿ ಶಾಲೆ ಎಂದರೆ ಹೀಗಿರುತ್ತದೆ ಎಂಬ ಕಲ್ಪನೆಯನ್ನೇ ಬುಡಮೇಲು ಮಾಡುವಂತೆ ಸ್ಥಳೀಯ ಜನರು ತಮ್ಮೂರಿನ ಶಾಲೆಯನ್ನು ಇದೀಗ ತಯಾರು ಮಾಡಿ ಸುದ್ದಿಯಾಗಿದ್ದಾರೆ.
ಸರ್ಕಾರಿ ಶಾಲೆ ಎಂದರೆ ಸುಣ್ಣ ಬಣ್ಣ ಕಾಣದೆ, ಕಲಿಕೆಗೆ ಪೂರಕ ಸೌಕರ್ಯಗಳೂ ಇಲ್ಲದೆ ಅನಾಥವಾಗುತ್ತಿರುವ ಇಂತಹ ಸಂದರ್ಭದಲ್ಲಿ ಚಟ್ನಹಳ್ಳಿಯ ಸರ್ಕಾರಿ ಶಾಲೆಗೆ ಊರವರು ಸುಣ್ಣ ಬಣ್ಣ ಹೊಡೆಸಿದ್ದಾರೆ. ಶಾಲೆಗೆ ರೈಲಿನಂತೆ ಬಣ್ಣ ಬಳಿದು, ಕಲಿಕೆಗೆ ಪೂರಕ ವಾತಾವರಣವನ್ನು ಸೃಷ್ಟಿಸಿಕೊಡುವ ಮೂಲಕ ಮಾದರಿಯಾಗಿದ್ದಾರೆ. ಇನ್ನು ಇದಕ್ಕೆ ತಗುಲಿದ ವೆಚ್ಚವನ್ನೂ ಸ್ಥಳೀಯರೇ ಹೊಂದಿಸುವ ಮೂಲಕ ತಮ್ಮೂರ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡುವ ಮಾದರಿ ಪ್ರಯತ್ನ ನಡೆಸಿದ್ದಾರೆ. ಆ ಮೂಲಕ ಮಕ್ಕಳನ್ನು ಶಾಲೆಗೆ ಸೆಳೆಯುವ ನಿಸ್ವಾರ್ಥ ಪ್ರಯತ್ನ ನಡೆಸಿರುವ ಊರ ಮಂದಿಗೆ ಶಹಬ್ಬಾಸ್ ಎನ್ನಲೇ ಬೇಕು.
Karnataka: A government school has been painted on the theme of a train at Thevara Chatnahalli village in Shivamogga district. The money for the makeover was raised by locals. pic.twitter.com/Vomyqeuxd9
— ANI (@ANI) September 11, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.