ಲಡಾಖ್: ಗಡಿಯಲ್ಲಿ ಭಾರತ ಮತ್ತು ಚೀನಾಗಳ ನಡುವೆ ಉದ್ವಿಗ್ನ ಸ್ಥಿತಿ ಹೆಚ್ಚುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಪಾಂಗಾಂಗ್ ತ್ಸೋ ಸರೋವರದ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಭಾರತೀಯ ಸೇನೆ ಮುಳ್ಳು ತಂತಿಗಳ ರೆಡ್ಲೈನ್ ನಿರ್ಮಿಸಿದ್ದು, ಈ ಬೇಲಿಯನ್ನು ದಾಟಿ ಬಂದರೆ ಚೀನಾ ಸೇನೆಯನ್ನು ಮುಲಾಜಿಲ್ಲದೆ ಹೊಡೆದೋಡಿಸಲಾಗುತ್ತದೆ ಎಂಬ ಖಡಕ್ ಎಚ್ಚರಿಕೆಯನ್ನು ರವಾನಿಸಿದೆ.
ಕೆಲ ಸಮಯದ ಹಿಂದೆ ಲಡಾಕ್ಖ್ನ ಫಿಂಗರ್ ಫೋರ್ ಮತ್ತು ಸುತ್ತಮುತ್ತಲಿನ ಭಾಗಗಳನ್ನು ಅತಿಕ್ರಮವಾಗಿ ಪ್ರವೇಶಿಸಲು ಚೀನಾ ಸೈನಿಕರು ವ್ಯರ್ಥ ಪ್ರಯತ್ನ ನಡೆಸಿದ್ದರು. ಸದ್ಯ ಈ ಪ್ರದೇಶವನ್ನು ಭಾರತೀಯ ಸೇನೆ ತನ್ನ ವಶಕ್ಕೆ ಪಡೆದುಕೊಂಡಿದೆ. ಜೊತೆಗೆ ಪಾಂಗಾಂಗ್ ಸರೋವರದ ಪ್ರದೇಶಗಳಲ್ಲಿಯೂ ಭಾರತೀಯ ಸೇನೆ ರೆಡ್ ಲೈನ್ ನಿರ್ಮಿಸಿ ಮತ್ತೆ ಚೀನಾಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಈ ಭೂಭಾಗ ಚೀನಾದ ಚಲನವಲನಗಳನ್ನು ಗಮನಿಸಲು ಮತ್ತು ಎಚ್ಚರಿಕೆಯಿಂದಿರಲು ಪೂರಕವಾಗಿದೆ. ಚೀನಾದ ಯಾವುದೇ ರೀತಿಯ ಕುತಂತ್ರವನ್ನು ತಲೆಕೆಳಗಾಗಿಸಲು ಭಾರತೀಯ ಸೇನೆ ಸಜ್ಜಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತ್ತ ಚೀನಾ ಸರೋವರದ ಉತ್ತರದ ಇನ್ನೊಂದು ಭಾಗದಲ್ಲಿ ಅನಧಿಕೃತವಾಗಿ ನಿರ್ಮಾಣ, ಜಮಾವಣೆಯನ್ನು ಮುಂದುವರೆಸುತ್ತಲೇ ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.