ವಾಷಿಂಗ್ಟನ್: ಬ್ರಿಟನ್ನ ಆಕ್ಸ್ಫರ್ಡ್ ಸಹಯೋಗದಲ್ಲಿ ಆಸ್ಟ್ರೆಜೆನಿಕಾ ಕಂಪೆನಿಯು ಅಭಿವೃದ್ಧಿ ಮಾಡಿದ್ದ ಕೊರೋನಾ ವ್ಯಾಕ್ಸಿನ್ ಅಂತಿಮ ಹಂತದ ಪರೀಕ್ಷೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಕಳೆದ ತಿಂಗಳು ಇದರ ಪರೀಕ್ಷೆಯನ್ನು ಆರಂಭ ಮಾಡಲಾಗಿತ್ತು.
ಸ್ವಯಂ ಪ್ರೇರಿತರಾಗಿ ಈ ಲಸಿಕೆಯ ಪ್ರಯೋಗಕ್ಕೆ ತಮ್ಮನ್ನು ತಾವು ಒಡ್ಡಿಸಿಕೊಂಡವರಲ್ಲಿ ಹಲವರಿಗೆ ಗಂಭೀರವಾದ ಅಡ್ಡ ಪರಿಣಾಮಗಳು ಉಂಟಾಗಿವೆ. ಇದು ಲಸಿಕೆಯ ಪ್ರಯೋಗದಿಂದುಂಟಾದ ಸಮಸ್ಯೆಯೋ ಅಥವಾ ಬೇರಿನ್ನೇನಾದರೂ ಕಾರಣಗಳಿಂದಾಗಿರುವ ಸಮಸ್ಯೆಯೋ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಿದೆ. ಆದ್ದರಿಂದ ತಾತ್ಕಾಲಿಕವಾಗಿ ಈ ಪ್ರಯೋಗವನ್ನು ತಡೆ ಹಿಡಿಯಲಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಆಕ್ಸ್ಫರ್ಡ್ನ ಮತ್ತೆರಡು ಸಂಶೋಧನೆಗಳಾದ ಮಾರ್ಡನ ಇಂಕ್ ಮತ್ತು ಫಿಜರ್ಗಳ ಅಂತಿಮ ಹಂತದ ಪ್ರಯೋಗಗಳೂ ಅಮೆರಿಕದಲ್ಲಿ ಈಗಾಗಲೇ ನಡೆಯುತ್ತಿದ್ದು, ಈ ಎರಡೂ ವ್ಯಾಕ್ಸಿನ್ಗಳು ಆಸ್ಟ್ರೆಜೆನಿಕಾ ಲಸಿಕೆಗಿಂತ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಂಸ್ಥೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.