ನವದೆಹಲಿ: ಕೆಲವು ದಿನಗಳ ಹಿಂದೆ ಫ್ರಾನ್ಸ್ನಿಂದ ಭಾರತದ ಅಂಬಾಲ ವಾಯುನೆಲೆಗೆ ಬಂದಿಳಿದಿರುವ ಯುದ್ಧ ವಿಮಾನ ರಫೇಲ್ಗಳು ಗುರುವಾರ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿವೆ.
ಈ ಸಂಬಂಧ ಅಂಬಾಲದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಫ್ರಾನ್ಸ್ ದೇಶದ ರಕ್ಷಣಾ ಸಚಿವ ಫ್ಲೋರೆನ್ಸ್ ಪಾರ್ಲೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಮಾರಂಭದ ಬಳಿಕ ಉಭಯ ದೇಶಗಳ ರಕ್ಷಣಾ ಸಚಿವರು ರಕ್ಷಣಾ ವಲಯದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.
ಈ ಮಾತುಕತೆಯ ವೇಳೆ ಮತ್ತೆ 36 ರಫೇಲ್ ವಿಮಾನಗಳ ಖರೀದಿ ಸಂಬಂಧ ಮಾತುಕತೆ ನಡೆಯುವ ಸಂಭಾವ್ಯತೆ ಇರುವುದಾಗಿಯೂ ತಿಳಿದು ಬಂದಿದೆ. ಈ ಸಂಬಂಧ ಫ್ರಾನ್ಸ್ ಜೊತೆಗೆ ಈಗಾಗಲೇ 59,000 ಕೋಟಿ ರೂ. ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ. ಅದರಲ್ಲಿ 10 ವಿಮಾನಗಳನ್ನು ಡಾನ್ ಏವಿಯೇಷನ್ ಕಂಪೆನಿ ಭಾರತಕ್ಕೆ ಹಸ್ತಾಂತರ ಮಾಡಿದೆ. ಅದರಲ್ಲಿ 5 ರಫೇಲ್ಗಳು ಭಾರತದ ಅಂಬಾಲ ವಾಯುನೆಲೆಯಲ್ಲಿದ್ದರೆ, ಮತ್ತೈದು ವಿಮಾನಗಳು ಪೈಲಟ್ ತರಬೇತಿಗಾಗಿ ಫ್ರಾನ್ಸ್ನಲ್ಲೇ ಇವೆ. 2021ರ ಒಳಗೆ ಎಲ್ಲಾ ವಿಮಾನಗಳೂ ಭಾರತಕ್ಕೆ ಬರುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.