ನ್ಯೂಯಾರ್ಕ್: ಕಳೆದ ಐದು ದಶಕಗಳಲ್ಲಿ ಅಮೆರಿಕದಲ್ಲಿ ಹಿಂದೂಗಳು ನೀಡಿದ ಕೊಡುಗೆಯನ್ನು ಆಳವಾಗಿ ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಸೆಪ್ಟೆಂಬರ್ 19-20ರಂದು ʼರಿಫ್ಲೆಕ್ಸನ್ಸ್@50: ವಾಕಿಂಗ್ ಇನ್ ಧರ್ಮʼ ವರ್ಚುವಲ್ ಸಮ್ಮೇಳನ ನಡೆಯಲಿದೆ.
ವರ್ಲ್ಡ್ ಹಿಂದೂ ಕೌನ್ಸಿಲ್ ಆಫ್ ಅಮೆರಿಕಾ (ವಿಎಚ್ಪಿಎ) ಆಯೋಜಿಸಿರುವ 2 ದಿನಗಳ ಸಮ್ಮೇಳನವು, ವಿಎಚ್ಪಿಎ 50 ವರ್ಷಗಳ ಕಾಲ ಅಮೆರಿಕದ ಹಿಂದೂ ಸಾಮಾಜಿಕ-ಸಾಂಸ್ಕೃತಿಕ-ಆಧ್ಯಾತ್ಮಿಕ ಆಂದೋಲನವನ್ನು ಬೆಳೆಸಿದ ಸ್ಮರಣಾರ್ಥವಾಗಿ ಅಯೋಜನೆಗೊಳ್ಳುತ್ತಿದೆ. ʼರಿಫ್ಲೆಕ್ಸನ್ಸ್@50: ವಾಕಿಂಗ್ ಇನ್ ಧರ್ಮʼವು ಹಲವು ಪ್ರವರ್ತಕರು ಮತ್ತು ನಾಯಕರ ಕೆಲಸ, ಅವರ ಹೋರಾಟಗಳು ಮತ್ತು ಅಮೆರಿಕದಲ್ಲಿ ಪ್ರಾಚೀನ ಹಿಂದೂ ತತ್ತ್ವಶಾಸ್ತ್ರವನ್ನು ಎತ್ತಿಹಿಡಿಯುವಲ್ಲಿನ ಸಾಧನೆಗಳ ಕುರಿತು ನಿರೂಪಣೆಗಳನ್ನು ಪ್ರೇರೇಪಿಸುತ್ತದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಮುಖ್ಯ ಭಾಷಣಕಾರರಾದ ವ್ಯೋಮೇಶ್ ಜೋಶಿ- ಸಿಇಒ, 3 ಡಿ ಸಿಸ್ಟಮ್ಸ್; ವಂದನಾ ತಿಲಕ್- ಸಿಇಒ ಮತ್ತು ನಿರ್ದೇಶಕ, ಅಕ್ಷಯ ಪತ್ರ ಯುಎಸ್ಎ; ಭಾರತೀಯ ಇತಿಹಾಸದ ವಿದ್ವಾಂಸ ಡಾ.ರಾಜ್ ವೇದಂ ಮತ್ತು ವೈದಿಕ್ ಪ್ರೆಂಡ್ಸ್ ಸಂಘದ ಅಧ್ಯಕ್ಷ ಬೆನ್ನಿ ಟಿಲ್ಮನ್ ಭಾಗಿಯಾಗಲಿದ್ದಾರೆ. ಇವರುಗಳು ನಾಯಕತ್ವ, ಸೇವೆ, ಗುರುತು ಮತ್ತು ಸಂಪ್ರದಾಯಗಳ ಪ್ರಭಾವ ಮತ್ತು ಇಂದಿನ ಜಗತ್ತಿನಲ್ಲಿ ಅವುಗಳ ಪ್ರಸ್ತುತತೆ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.
“ಕಳೆದ 50 ವರ್ಷಗಳಲ್ಲಿ ಹಿಂದೂ ಸಮುದಾಯವು ಏನು ಸಾಧಿಸಿದೆ ಮತ್ತು ಮುಂದಿನ 50 ವರ್ಷಗಳಲ್ಲಿ ಮತ್ತು ಅದಕ್ಕೂ ಮೀರಿ ಅದು ಹೇಗೆ ವಿಕಸನಗೊಳ್ಳುತ್ತದೆ ಎಂಬುದನ್ನು ಕಲಿಯಲು ನಾನು ನಿಮ್ಮನ್ನು ಆಹ್ವಾನಿಸುತ್ತೇನೆ” ಎಂದು ವರ್ಲ್ಡ್ ಹಿಂದೂ ಕೌನ್ಸಿಲ್ ಆಫ್ ಅಮೆರಿಕಾ ಅಧ್ಯಕ್ಷ ಡಾ. ಅಭಯ ಅಸ್ತಾನಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.