ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಬೆಂಬಲವನ್ನು ನೀಡಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು, ‘ಫೌಜಿ’ ಎಂಬ ಹೊಸ ಗೇಮಿಂಗ್ ಆ್ಯಪ್ ಅನ್ನು ಹೊರತರುತ್ತಿದ್ದಾರೆ.
ಮಾತ್ರವಲ್ಲದೆ, ಈ ಆಕ್ಷನ್ ಗೇಮ್ನಿಂದ ಬರುವ ಆದಾಯದಲ್ಲಿ ಶೇಕಡ 20ರಷ್ಟನ್ನು ಯೋಧರ ಕುಟುಂಬಗಳ ಕಲ್ಯಾಣಕ್ಕಾಗಿ ಸ್ಥಾಪನೆ ಮಾಡಲಾದ ಭಾರತ್ ಕೆ ವೀರ್ಗೆ ನೀಡುವುದಾಗಿ ಅಕ್ಷಯ್ ಕುಮಾರ್ ಅವರು ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್, “ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಬೆಂಬಲ ನೀಡುತ್ತಾ, ನಿರ್ಭೀತ ಆಕ್ಷನ್ ಗೇಮ್ ʼಫೌಜಿʼ ಅನ್ನು ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿದ್ದೇನೆ. ಇದು ಮನೋರಂಜನೆಯ ಜೊತೆಗೆ ನಮ್ಮ ಯೋಧರ ತ್ಯಾಗವನ್ನು ಆಟಗಾರರಿಗೆ ಮನವರಿಕೆ ಮಾಡಿಕೊಡುತ್ತದೆ. ಇದರಿಂದ ಬರುವ ಶೇಕಡ 20ರಷ್ಟು ಆದಾಯವನ್ನು ಭಾರತ್ ಕೆ ವೀರ್ಗೆ ನೀಡಲಿದ್ದೇವೆ” ಎಂದಿದ್ದಾರೆ.
ದೇಶದ ಪರವಾಗಿ ಸದಾ ಕಾರ್ಯನಿರ್ವಹಿಸುವ ನಟ ಅಕ್ಷಯ್ ಕುಮಾರ್ ಅವರ ಈ ಹೊಸ ನಡೆ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.
Supporting PM @narendramodi’s AtmaNirbhar movement, proud to present an action game,Fearless And United-Guards FAU-G. Besides entertainment, players will also learn about the sacrifices of our soldiers. 20% of the net revenue generated will be donated to @BharatKeVeer Trust #FAUG pic.twitter.com/Q1HLFB5hPt
— Akshay Kumar (@akshaykumar) September 4, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.