ನವದೆಹಲಿ: ಜನರ ರಾಷ್ಟ್ರಪತಿ, ಭಾರತದ ಕ್ಷಿಪಣಿ ಜನರ ಡಾ.ಎಪಿಜೆ ಅಬ್ದುಲ್ ಕಲಾಂ ಭೂ ತಾಯಿಯ ಒಡಲು ಸೇರಿದ್ದಾರೆ. ಅವರ ಹುಟ್ಟೂರು ರಾಮೇಶ್ವರಂನಲ್ಲಿ ಗುರುವಾರ 12 ಗಂಟೆಗೆ ಇಸ್ಲಾಂ ಸಂಪ್ರದಾಯದಂತೆ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಇಂದು ಬೆಳಿಗ್ಗೆ ಅವರ ಪಾರ್ಥಿವ ಶರೀರವನ್ನು ಮಸೀದಿಯಿಂದ ಅವರ ಹಿರಿಯರ ಮನೆಗೆ ಹಸಿರು ಸಂಪ್ರದಾಯಿಕ ಬಟ್ಟೆಯನ್ನು ಹೊದಿಸಿ ತರಲಾಯಿತು. ಸೇನೆಯ ಮೂರು ಮುಖ್ಯಸ್ಥರು ಈ ವೇಳೆ ಹಾಜರಿದ್ದರು. ಕಲಾಂ ಅವರ ಅಣ್ಣ 99 ವರ್ಷದ ಮೊಹಮ್ಮದ್ ಮುತು ಮೀರಾಯ್ ಲೆಬ್ಬಾ ಮರೈಕರ್ ಅವರೂ ಉಪಸ್ಥಿತರಿದ್ದರು.
ಪೇಯಿ ಕುರುಂಬು ಮೈದಾನದಲ್ಲಿ ಇಡಲಾಗಿದ್ದ ತ್ರಿವರ್ಣ ಧ್ವಜ, ಹೂವಿನಿಂದ ಅಲಂಕೃತಗೊಂಡಿದ್ದ ಅವರ ಪಾರ್ಥಿವ ಶರೀರಕ್ಕೆ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿ, ಕೈ ಮಡಚಿ ಪ್ರದಕ್ಷಿಣೆ ಹಾಕಿದರು. ಹಲವಾರು ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಹುಲ್ ಗಾಂಧಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಮಹಾನ್ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದರು.
ಕಲಾಂ ಅವರ ಅಂತಿಮ ದರ್ಶನ ಪಡೆಯಲು ದೇಶದಾದ್ಯಂತದಿಂದ ಸಾವಿರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು, ದೋಣಿ, ಬಸ್, ರೈಲುಗಳ ಮೂಲಕ ರಾಮೇಶ್ವರಂಗೆ ಆಗಮಿಸಿದ್ದರು. ಕೆಲವರಂತು ರಾತ್ರಿಯಿಡಿ ರಸ್ತೆಯಲ್ಲೇ ಮಲಗಿ ಇಂದು ಕಲಾಂಗೆ ನಮನ ಸಲ್ಲಿಸಿದರು. ಈ ಮೂಲಕ ಭಾರತದ ರತ್ನ, ಕಣ್ಣಣಿಗೆ ಅಂತಿಮ ವಿದಾಯ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.