ಮಾಸ್ಕೋ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಹತ್ವದ ಶಾಂಘೈ ಕಾರ್ಪೊರೇಷನ್ ಆರ್ಗನೈಝೇಶನ್ ಸಭೆಗಾಗಿ ರಷ್ಯಾಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ತನಗೆ ಹಸ್ತಲಾಘವ ಮಾಡಲು ಬಂದ ರಷ್ಯಾದ ಅಧಿಕಾರಿಗೆ ನಮಸ್ತೆ ಮಾಡಿ ತಮ್ಮ ಬದ್ಧತೆಯನ್ನು ಮೆರೆದಿದ್ದಾರೆ.
ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ಯಾರೊಂದಿಗೂ ಹಸ್ತಲಾಘವ ಮಾಡುವುದು ಉತ್ತಮವಾದ ನಡೆಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿದೆ. ಹೀಗಾಗಿ ವಿಶ್ವ ನಾಯಕರುಗಳು ಕೂಡ ಹಸ್ತಲಾಘವ, ಅಪ್ಪುಗೆ ಬದಲು ನಮಸ್ತೆ ಮಾಡುತ್ತಿದ್ದಾರೆ.
ರಾಜನಾಥ್ ಸಿಂಗ್ ಅವರು ಕೂಡ ಇದೇ ನಡೆಯನ್ನು ಅನುಸರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಮಾಸ್ಕೋದಲ್ಲಿನ ಅಧಿಕಾರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅಧಿಕಾರಿಯೊಬ್ಬರು ಅವರಿಗೆ ಹ್ಯಾಂಡ್ ಶೇಕ್ ಮಾಡಲು ಕೈ ಮುಂದೆ ತಂದಿದ್ದಾರೆ. ಆದರೆ ರಾಜನಾಥ್ ಸಿಂಗ್ ಅವರು ವಿನಮ್ರವಾಗಿ ನಮಸ್ತೆ ಮಾಡಿದ್ದಾರೆ. ಅಧಿಕಾರಿಗಳು ಕೂಡ ಪ್ರತಿ ನಮಸ್ತೆ ಮಾಡಿದ್ದಾರೆ. ಅಲ್ಲದೇ, ಭೇಟಿಯ ವೇಳೆ ಸಿಂಗ್ ಮಾಸ್ಕ್ ಅನ್ನು ತಪ್ಪದೆ ಧರಿಸಿದ್ದಾರೆ.
RM Shri @rajnathsingh reaches Moscow pic.twitter.com/elG2tZUZMB
— रक्षा मंत्री कार्यालय/ RMO India (@DefenceMinIndia) September 2, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.