ನವದೆಹಲಿ: ಕೇಂದ್ರ ಸರ್ಕಾರಕ್ಕೆ ಪಾವತಿಸಲು ಬಾಕಿ ಇರುವ 1.43 ಲಕ್ಷ ಕೋಟಿ ರೂ. ಅಡ್ಜೆಸ್ಟೆಡ್ ಗ್ರಾಸ್ ರೆವೆನ್ಯು (ಎಜಿಆರ್) ಮೊತ್ತವನ್ನು ಪಾವತಿಸಲು ಟೆಲಿಕಾಂ ಸಂಸ್ಥೆಗಳಿಗೆ 10 ವರ್ಷಗಳ ಕಾಲಾವಕಾಶವನ್ನು ನೀಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ, ಎಸ್. ಅಬ್ದುಲ್ ನಝೀರ್, ಎಂ. ಆರ್. ಶಾ ಅವರನ್ನೊಳಗೊಂಡ ಪೀಠ ಈ ಆದೇಶವನ್ನು ನೀಡಿದೆ. ಈ ಸಂಬಂಧ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಕೋರ್ಟ್ ಈ ಆದೇಶವನ್ನು ನೀಡಿದೆ. ಆದರೆ ಈಗಾಗಲೇ ನೀಡಲಾಗಿರುವ 10 ವರ್ಷಗಳ ಕಾಲಾವಕಾಶದಲ್ಲಿ ಬಾಕಿ ಉಳಿದಿರುವ ಮೊತ್ತಗಳನ್ನು ಯಾವುದೇ ಪರಿಶೀಲನೆ, ಕಾರಣಗಳನ್ನು ನೀಡದೆಯೇ ಪಾವತಿ ಮಾಡಬೇಕು ಎಂದು ಕೋರ್ಟ್ ಈ ಆದೇಶದಲ್ಲಿ ವಿವರಿಸಿದೆ. ಮಾರ್ಚ್ 31,2031 ವೇಳೆಗೆ ಎಲ್ಲಾ ಕಂತುಗಳನ್ನು ಪಾವತಿಸಬೇಕು ಎಂದೂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಇನ್ನು ಟೆಲಿಕಾಂ ಕಂಪೆನಿಗಳು ವಾರ್ಷಿಕವಾಗಿ ಸಲ್ಲಿಸಬೇಕಾದ ಕಂತಿನ ಮೊದಲ ಕಂತು ಪಾವತಿಯನ್ನು 31 ಮಾರ್ಚ್ 2021ರ ಒಳಗೆ ಪಾವತಿಸುವಂತೆ ಕೋರ್ಟ್ ತಿಳಿಸಿದೆ. ಒಟ್ಟು ಮೊತ್ತದ 10% ವನ್ನು ಪಾವತಿ ಮಾಡುವಂತೆ ತಿಳಿಸಿದೆ. ಪ್ರಸ್ತುತ ಕೊರೋನಾ ಸಂಕಷ್ಟದ ಕಾರಣದಿಂದ ಟೆಲಿಕಾಂ, ಬ್ಯಾಂಕ್, ಸರ್ಕಾರದ ಖಜಾನೆಯ ಮೇಲೆಯೂ ಪರಿಣಾಮ ಬೀರಿದ್ದು, ಈ ವಿಚಾರವನ್ನೂ ಸುಪ್ರೀಂಕೋರ್ಟ್ ಗಮನಕ್ಕೆ ತರಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.