ನವದೆಹಲಿ: ಕೊರೋನಾ ಸೋಂಕು ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಜಪಾನ್ 3,500 ಕೋಟಿ ರೂ. ಗಳ ಅಧಿಕೃತ ಅಭಿವೃದ್ಧಿ ಆಧಾರಿತ ಸಾಲವನ್ನು ಭಾರತಕ್ಕೆ ನೀಡಲು ಮುಂದಾಗಿದೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಆರೋಗ್ಯ ವಲಯದಲ್ಲಿನ ಸುಧಾರಣೆಗಾಗಿ ಡಿಪಾರ್ಟ್ಮೆಂಟ್ ಆಫ್ ಎಕನಾಮಿಕ್ ಅಫೇರ್ಸ್ನ ಅಡಿಷನಲ್ ಸೆಕ್ರೆಟರಿ ಡಾ. ಸಿ.ಎಸ್. ಮೊಹಾಪಾತ್ರ ಮತ್ತು ಭಾರತದ ಜಪಾನ್ ರಾಯಭಾರಿ ಶುಜುಕಿ ಸಟೋಶಿ ಅವರ ನಡುವೆ ಈ ಸಾಲ ಒಪ್ಪಂದ ನಡೆಯಿತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಮಾಹಿತಿಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡ ಮೊಹಪಾತ್ರ ಮತ್ತು ಜೆಐಸಿಎ ಮುಖ್ಯ ಪ್ರತಿನಿಧಿ ನವದೆಹಲಿಯ ಕಟ್ಸಾವೊ ಮಾಟ್ಸುಮೊಟೋದಲ್ಲಿ ಈ ಸಾಲ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದರು. ಜಪಾನ್ ಅಂತರರಾಷ್ಟ್ರೀಯ ಕಾರ್ಪೋರೇಷನ್ ಏಜೆನ್ಸಿ (JICA) ಎಂಬುದು ಸರ್ಕಾರಕ್ಕೆ ಸಂಬಂಧಿಸಿದಂತಹ ಒಂದು ಸಹಕಾರಿ ಸಂಸ್ಥೆಯಾಗಿದ್ದು, ಈ ಮೂಲಕವೇ ಇದೀಗ ಈ ಸಾಲ ಒಪ್ಪಂದ ನಡೆದಿದೆ.
ಈ ಒಪ್ಪಂದ ಭಾರತ ಕೊರೋನಾ ವೈರಸ್ ತಡೆಗೆ ನಡೆಸುವ ಪ್ರಯತ್ನಗಳನ್ನು ಬೆಂಬಲಿಸುವ ಸಲುವಾಗಿ ನೀಡಲಾಗುತ್ತಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಬರುವ ಸಾಧ್ಯತೆಗಳಿರುವ ಸಾಂಕ್ರಾಮಿಕ ರೋಗಗಳನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ಅವುಗಳ ವಿರುದ್ಧ ಹೋರಾಡುವ ಭಾರತದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶಕ್ಕಾಗಿ ನೀಡಲಾಗುತ್ತಿದೆ. ಜಪಾನ್ ಸರ್ಕಾರದ 70 ಕೋಟಿ ರೂ. ಗಳ ಅನುದಾನ ಸಹಾಯಕ್ಕೆ ಸಂಬಂಧಿಸಿದಂತೆಯೂ ಡಾ. ಮೊಹಪಾತ್ರ ಮತ್ತು ಶುಜುಕಿ ನಡುವೆ ಒಪ್ಪಂದಗಳ ನಿಯಮಗಳ ವಿನಿಮಯ ನಡೆಯಿತು.
ಈ ಅನುದಾನ ಭಾರತದಲ್ಲಿನ ವೈದ್ಯಕೀಯ ವ್ಯವಸ್ಥೆಯನ್ನು ಬಲಪಡಿಸುವುದು, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ನೀಡಲಾಗಿದೆ. ಕೊರೋನಾ ಸಂದರ್ಭದಲ್ಲಿ ಗಂಭೀರ ಪರಿಣಾಮಗಳನ್ನು ಅನುಸರಿಸುತ್ತಿರುವ ರೋಗಿಗಳ ಆರೋಗ್ಯ ಕಾಪಾಡಿಕೊಳ್ಳಲು ಪೂರಕ ವ್ಯವಸ್ಥೆ ಕಲ್ಪಿಸುವ ಸದುದ್ದೇಶದಿಂದ ಈ ಅನುದಾನ ನೀಡಲಾಗಿದೆ. ಈ ಸಾಲ ಒಪ್ಪಂದ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಿಗಿಗೊಳಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.