ವಾಷಿಂಗ್ಟನ್: ಕೊರೋನಾ ಚಿಕಿತ್ಸೆಗೆ ಸಂಶೋಧನೆ ಮಾಡಲಾಗಿರುವ ಆಸ್ಟ್ರಾಜೆನೆಕಾ ಔಷಧ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಗೆ ತಲುಪಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಇನ್ನೇನು ಕೆಲವೇ ಸಮಯದಲ್ಲಿ ಈ ಲಸಿಕೆಯು ಅಂತಿಮ ಹಂತದ ಹಲವು ಲಸಿಕೆಗಳ ಸಾಲಿಗೆ ಸೇರ್ಪಡೆಯಾಗಲಿದೆ ಎಂದು ತಿಳಿಸಿದ್ದಾರೆ. ಜನರು ಅಸಾಧ್ಯ ಎಂದೇ ಅಂದುಕೊಂಡಿದ್ದ ಕಾರ್ಯಗಳನ್ನು ಅಮೆರಿಕ ಸಾಧಿಸಿ ತೋರಿಸುತ್ತಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಲಸಿಕೆಗಳ ಪ್ರಯೋಗದಂತಹ ವಿಚಾರಗಳು ದೀರ್ಘಾವಧಿ ತೆಗೆದುಕೊಳ್ಳುತ್ತವೆ. ಆದರೆ ಅಮೆರಿಕ ಆಡಳಿತ ಈ ಸಾಧನೆಯನ್ನು ಕೆಲವೇ ತಿಂಗಳುಗಳಲ್ಲಿ ಮಾಡಿ ತೋರಿಸಿರುವುದಾಗಿಯೂ ಅವರು ಹೇಳಿದ್ದಾರೆ.
ಆಕ್ಸ್ಫರ್ಡ್ ವಿವಿ ತಯಾರಿಸಿರುವ ಈ ಲಸಿಕೆಯನ್ನು ಅಮೆರಿಕಾದ ವಿವಿಧ ಭಾಗಗಳಲ್ಲಿ 30 ಸಾವಿರ ಸ್ವಯಂಸೇವಕರ ಮೇಲೆ ಪ್ರಯೋಗಿಸಲಾಗುವುದು. ಅವರ ನೋಂದಾವಣಿಯನ್ನೂ ಸಂಸ್ಥೆ ಈಗಾಗಲೇ ನಡೆಸಿದೆ. ಈ ಸಂಬಂಧ ಆಸ್ಟ್ರಾಜೆನೆಕಾ ಪ್ರಕಟಣೆಯನ್ನು ನೀಡಿದೆ. ಈ ಪ್ರಯೋಗಕ್ಕೆ 18 ವರ್ಷ ಮೇಲ್ಪಟ್ಟವರನ್ನು ನೋಂದಾಯಿಸಿಕೊಳ್ಳುವುದಾಗಿಯೂ ಸಂಸ್ಥೆ ತಿಳಿಸಿದೆ. ಬೇರೆ ಬೇರೆ ಜನಾಂಗದ ಆರೋಗ್ಯವಂತರು, ಖಾಯಿಲೆಗಳಿರುವವರು, ಎಚ್ಐವಿ ಪೀಡಿತರು ಮೊದಲಾದವರ ಮೇಲೆ ಈ ಲಸಿಕೆ ಪ್ರಯೋಗಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
2021ರ ವೇಳೆಗೆ 30 ಕೋಟಿ ಡೋಸೇಜ್ಗಳಷ್ಟು ಲಸಿಕೆಗಳನ್ನು ಒದಗಿಸುವ ಗುರಿಯನ್ನು ಸಂಸ್ಥೆ ಹೊಂದಿದೆ. ಆಕ್ಸ್ಫರ್ಡ್ ಮತ್ತು ಬ್ರಿಟಿಷ್ ಸ್ವೀಡಿಶ್ ಕಂಪೆನಿ ಆಸ್ಟ್ರಾಜೆನೆಕಾ ಸಹಯೋಗದಲ್ಲಿ ಈ ಲಸಿಕೆಯನ್ನು ಅಭಿವೃದ್ಧಿ ಮಾಡಲಾಗಿದೆ. ಇದೊಂದು ಬಹುನಿರೀಕ್ಷಿತ ಲಸಿಕೆ ಎಂದೂ ಸಂಸ್ಥೆ ತಿಳಿಸಿದೆ. ಜಗತ್ತಿನಾದ್ಯಂತ ಆಸ್ಟ್ರಾಜೆನೆಕಾ, ಮಾಡರ್ನಾ ಇಂಕ್, ಪಿಫಿಜರ್ ಇಂಕ್ ಲಸಿಕೆಗಳು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಆರಂಭಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.